ಕೆಜಿಎಫ್ ನಾಯಕಿ ಶ್ರೀನಿಧಿ ಶೆಟ್ಟಿ ಚಿತ್ರದ ಏನ್ ಹೇಳುದ್ರೂ ಗೊತ್ತಾ..?

ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಟ್ರೇಲರ್ ನಿಂದಲೇ ಈಗಾಗಲೆ ಸಾಕಷ್ಟು ಕ್ರೇಜ್ ಕ್ರಿಯೆಟ್ ಮಾಡಿದೆ. ಈ ಬಗ್ಗೆ ಮಾತನಾಡಿದ ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ನಾನು ಪ್ರತಿಬಾರಿ ಟ್ರೇಲರ್ ನೋಡಿದಾಗಲೂ ಕೂಡ ತುಂಬಾ ಕುತೂಹಲದಿಂದಲೇ ನೋಡುತ್ತೇನೆ ಎಂದಿದ್ದಾರೆ.ಮಾಡೆಲ್ ಆಗಿದ್ದ ಶ್ರೀನಿಧಿ ಶೆಟ್ಟಿ ಮೊದಲ ಬಾರಿಗೆ ಕನ್ನಡ ಚಿತ್ರದ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಬಿಗ್ ಬಜೆಟ್ ಹಾಗೂ ತಾರಾಂಗಣವಿರುವ ಚಿತ್ರದಲ್ಲೇ ಅವಕಾಶ ದೊರಕಿರುವುದು ಅವರ ಸಂತಸವನ್ನು ಇನ್ನಷ್ಟು ಹೆಚ್ಚಿಸಿದೆ ಎಂದ ಅವರು ಟ್ರೇಲರ್ ನಲ್ಲಿ ಗ್ಲಾಮರಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ತನ್ನ ಪಾತ್ರಕ್ಕೆ ಸಾಕಷ್ಟು ವಿಭಿನ್ನತೆಯಿಂದ ಕೂಡಿದೆ ಎಂದು ಹೇಳುತ್ತಾರೆ. ನಿರ್ದೇಶಕ ಪ್ರಶಾಂತ್ ನೀಲ್ ಅವತಿಗೆ ಜನರ ಕುತೂಹಲವನ್ನು ಕಾಯ್ದುಕೊಳ್ಳುವುದು ಹೇಗೆಂದು ತಿಳಿದಿದೆ, ಚಿತ್ರ ತೆರೆ ಕಾಣುವವರೆಗೆ ನನ್ನ ಗ್ಲಾಮರ್ ನೋಟವನ್ನೇ ನೋಡಿ ಎಂದು ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ತನ್ನ ಭವಿಷ್ಯದ ಕುರಿತು ಮಾತನಾಡಿದ ಶ್ರೀನಿಧಿ ಶೆಟ್ಟಿ ನಾನು ಈ ಚಿತ್ರದ ಬಿಡುಗಡೆಗಾಗಿ ಎದುರು ನೋಡುತ್ತಿದ್ದೇನೆ. ಪ್ರೇಕ್ಷಕರು ನನ್ನ ಅಭಿನಯಕ್ಕೆ ಯಾವ ರೀತಿ ರಿಯಾಕ್ಟ್ ಮಾಡುವರು, ನನಗೆ ಇನ್ನು ಮುಂದಿನ ದಿನಗಳಲ್ಲಿ ಯಾವ ಬಗೆಯ ಅವಕಾಶ ದೊರೆಯಲಿದೆ ಎನ್ನುವುದು ನನಗೆ ಕುತೂಹಲದ ವಿಚಾರವಾಗಿದೆ ಎಂದು ತಿಳಿಸಿದರು.
keywords: KGF srinidhi shetty, KGF kannada movie
Comments