ಕೆಜಿಎಫ್ ಗೆ ವಿಶ್ ಮಾಡಿದ ನಟಸಾರ್ವಭೌಮ..!

ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಚಿತ್ರವಾದ ಕೆಜಿಎಫ್ ಸಿನಿಮಾ ಟ್ರೈಲರ್ ಬಿಡುಗಡೆಯಾಗಿದೆ. ಯಶ್ ಅಭಿಮಾನಿಗಳು ಕೆಜಿಎಫ್ ಚಿತ್ರಕ್ಕಾಗಿ ಕಾಯುತ್ತಿದ್ದಾರೆ ಯಾವಾಗ ತೆರೆ ಮೇಲೆ ಸಿನಿಮ ಬರುತ್ತದಯೋ, ಯಶ್ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿರುವುದು ಸುಳ್ಳಲ್ಲ.… ಇದೀಗ ಸಿನಿಮಾದ ಟ್ರೈಲರ್ ನೋಡಿಯೋ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಗ್ಯಾಂಗ್ ಸ್ಟರ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾ ರಂಗವೇ ಸ್ಯಾಂಡಲ್ ವುಡ್ ನತ್ತ ಮುಖ ಮಾಡಿದೆ ಅಂದ್ರೆ ತಪ್ಪಲ್ಲ.
ಸದ್ಯ ಕೆಜಿಎಫ್ ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ವಿಶ್ ಮಾಡಿದ್ದಾರೆ. ಕೆಜಿಎಫ್ ಚಿತ್ರದ ಟ್ರೈಲರ್ ಎಲ್ಲ ಭಾಷೆಯಲ್ಲೂ 20 ಲಕ್ಷಕ್ಕೂ ಹೆಚ್ಚು ವ್ಯೂ ಪಡೆದಿದ್ದಕ್ಕೆ ಯಶ್, ವಿಜಯ್ ಸರ್, ಪ್ರಶಾಂತ್ ನೀಲ್ ಹಾಗೂ ಇಡೀ ಚಿತ್ರತಂಡಕ್ಕೆ ನನ್ನ ಶುಭಾಶಯಗಳು ಎಂದು ಪುನೀತ್ ರಾಜ್ ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.ಜೊತೆಗೆ ನಟ ಸಾರ್ವಭೌಮ ಚಿತ್ರದ ಡಬ್ಬಿಂಗ್ ಮುಗಿಸಲಾಗಿದೆ ಎಂದು ಹೇಳಿ ಒಂದು ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ. ಮುಂದಿನ ತಿಂಗಳ ಮೊದಲ ವಾರದಲ್ಲಿ ನಟಸಾರ್ವಭೌಮ ಸಿನಿಮಾ ಬಿಡುಗಡೆಯಾಗಲಿದೆ.
Comments