ಆ್ಯಕ್ಷನ್ ಕಟ್ ಹೇಳಲು ಸಿದ್ದರಾದ ನಾದಬ್ರಹ್ಮ ಹಂಸಲೇಖ : ಶಕುಂತಲೆಗಾಗಿ ನಾಯಕಿಯ ಹುಡುಕಾಟ

ಚಂದನವನದಲ್ಲಿ ನಾದಬ್ರಹ್ಮ ಎಂದೇ ಪ್ರಖ್ಯಾತಿಯಾಗಿರುವ ಸಂಗೀತ ನಿರ್ದೇಶಕ ಹಂಸಲೇಖ ಇದೀಗ ಆ್ಯಕ್ಷನ್ ಕಟ್ ಹೇಳಲು ಸಿದ್ದರಾಗುತ್ತಿದ್ದಾರೆ. ಇದೀಗ ಹಂಸಲೇಖ ಶಕುಂತಲೆ ಸಿನಿಮಾದ ನಿರ್ದೇಶನದ ಜವಾಬ್ದಾರಿ ತೆಗೆದುಕೊಂಡಿದ್ದಾರೆ.ಹಂಸಲೇಖ ಅವರು ಖಾಸಗಿ ವಾಹಿನಿಯ ಸರಿಗಮಪ ಮ್ಯೂಸಿಕ್ ರಿಯಾಲಿಟಿ ಶೋನಿಂದ ಸ್ವಲ್ಪ ಬಿಡುವು ಮಾಡಿಕೊಂಡಿದ್ದಾರೆ. ಹಂಸಲೇಖ ಅವರು ನಿರ್ದೇಶನ ಮಾಡುತ್ತಿರುವ ಸಿನಿಮಾದ ಬಗ್ಗೆ ಸ್ಯಾಂಡಲ್ ವುಡ್ ನಲ್ಲಿ ಬಾರಿ ಕುತೂಹಲವಿದೆ.
ಹಾಗಾಗಿ ಶಕುಂತಲೆ ಸಿನಿಮಾದ ಕೆಲಸವನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಈ ಸಿನಿಮಾ ಮೂಡಿಬರಲಿದೆ. ಈ ಸಿನಿಮಾದಲ್ಲಿ ಶಕುಂತಲೆ ಪಾತ್ರದಲ್ಲಿ ಯಾರೂ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಸದ್ಯದ ವಿಷಯವಾಗಿದೆ.. ಐಶ್ವರ್ಯಾ ರೈ ಬಚ್ಚನ್, ದೀಪಿಕಾ ಪಡುಕೋಣೆ, ಮಾಧುರಿ ಧೀಕ್ಷಿತ್, ಅನುಷ್ಕಾ ಮತ್ತಿತರ ಹೆಸರು ಕೇಳಿಬರುತ್ತಿದೆ. ಶಕುಂತಲೆಯಾಗಿ ಯಾರು ತೆರೆ ಮೇಲೆ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
Comments