ಅಪ್ಪು ಅಭಿಮಾನಿಗಳಿಗೆ ಗುಡ್ ನ್ಯೂಸ್: 'ನಟ ಸಾರ್ವಭೌಮ' ಚಿತ್ರದ ರಿಲೀಸ್ ಡೇಟ್ ಫಿಕ್ಸ್
ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಚಿತ್ರಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಕೂಡ ಒಂದು.. ಈ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಪುನೀತ್ ರಾಜ್ ಕುಮಾರ್ ಅಭಿನಯದ 'ನಟ ಸಾರ್ವಭೌಮ' ಚಿತ್ರ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟು ಹಾಕಿದ್ದು. ಈ ಸಿನಿಮಾ ಡಿಸೆಂಬರ್ 6 ರಂದು ರಾಜ್ಯಾದ್ಯಂತ ತೆರೆಗೆ ಬರುವುದು ಪಕ್ಕಾ ಆಗಿದೆ ಎಂದು ಚಿತ್ರತಂಡ ತಿಳಿಸಿದೆ. ಅಭಿಮಾನಿಗಳು ಇದರಿಂದ ಫುಲ್ ಖುಷ್ ಆಗಿದ್ದಾರೆ.
ಈಗಾಗಲೇ ನಟ ಸಾರ್ವಭೌಮ ಚಿತ್ರತಂಡ ಡಬ್ಬಿಂಗ್ ಮುಗಿಸಿದ ಖುಷಿಯಲ್ಲಿದೆ. ಸಿನಿಮಾ ತೆರೆಗೆ ತರಲು ಎಲ್ಲಾ ರೀತಿಯ ಸಿದ್ದತೆ ನಡೆಸುತ್ತಿದೆ ಚಿತ್ರತಂಡ.ಇನ್ನು ನಟಸಾರ್ವಭೌಮ ಚಿತ್ರಕ್ಕೆ ಪವನ್ ಒಡೆಯರ್ ಕಥೆ ಮತ್ತು ಚಿತ್ರಕಥೆ ಬರೆಯುವುದರ ಜೊತೆಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಪುನೀತ್ ಗೆ ಜೋಡಿಯಾಗಿ ರಚಿತಾ ರಾಮ್ ನಟಿಸುತ್ತಿದ್ದು, ಚಿತ್ರಕ್ಕೆ ವೈದಿ ಛಾಯಾಗ್ರಹಣ, ಇಮಾನ್ .ಡಿ. ಸಂಗೀತವಿದೆ. ಒಟ್ಟಾರೆ ಈ ವರ್ಷದ ಕೊನೆಯಲ್ಲಿ ಸಿನಿಮಾ ಹಬ್ಬವೇ ನಡೆಯುತ್ತಿದ್ದು ಸಿನಿ ರಸಿಕರು ಸಖತ್ ಖುಷಿಯಲ್ಲಿದ್ದಾರೆ. ಇನ್ನೂ ನಟಸಾರ್ವಭೌಮ ಚಿತ್ರ ತೆರೆಮೇಲೆ ಯಾವ ರೀತಿ ಮೂಡಿ ಬರುತ್ತದೆ ಎನ್ನುವುದನ್ನು ಡಿಸೆಂಬರ್ ವರೆಗೂ ಕಾದು ನೋಡಲೇ ಬೇಕು..
Comments