25 ವರ್ಷದ ಸಂಭ್ರಮದಲ್ಲಿ ಜುರಾಸಿಕ್ ಪಾರ್ಕ್ ಸಿನಿಮಾ..!

ಜುರಾಸಿಕ್ ಪಾರ್ಕ್ ಸಿನಿಮಾ ಇಂದಿಗೂ ಕೂಡ ಎಲ್ಲರಿಗೂ ಚಿರ ಪರಿಚಿತ.. ಮಕ್ಕಳಿಗಂತೂ ಈ ರೀತಿಯ ಸಿನಿಮಾಗಳು ತುಂಬಾ ಇಷ್ಟವಾಗುತ್ತವೆ. ವಿಶ್ವದಾದ್ಯಂತ ಜನಮನ ಗೆದ್ದ ಸ್ಟೀವನ್ ಸ್ಪೀಲ್ ಬರ್ಗ್ ಅವರ ಪ್ರಸಿದ್ಧ ಹಾಲಿವುಡ್ ಚಿತ್ರ ಜುರಾಸಿಕ್ ಪಾರ್ಕ್ ಗೆ ಇದೀಗ 25 ವರ್ಷ ತುಂಬಿದೆ. ಈ 25 ರ ಸಂಭ್ರಮದಲ್ಲಿ ಜುರಾಸಿಕ್ ಪಾರ್ಕ್ ಥೀಮ್‌ನಲ್ಲಿ ಒಂದು ಕಲಾ ಪ್ರದರ್ಶನ ಏರ್ಪಡಿಸಲಾಗಿದೆ.
ಕಲೆ ಹಾಗೂ ವಿನ್ಯಾಸದ ಕುರಿತ ಕ್ಯಾಲಿಫೋರ್ನಿಯಾ ಶೃಂಗವಾದ ಡಿಸೈನರ್ ಕಾನ್ ನಲ್ಲಿ ಈ ಪ್ರದರ್ಶನವು ನಡೆಯಲಿದೆ. ಈ ಚಿತ್ರದ ಪ್ರತಿಯೊಂದು ಕ್ಷಣವೂ ರೋಚಕ ಮತ್ತು ಎಲ್ಲರನ್ನೂ ಭಯಗೊಳಿಸುವಂತಿತ್ತು. ಆ ಕ್ಷಣಗಳನ್ನು ನೆನಪಿಸುವಂತಹ ಕಲಾ ಪ್ರದರ್ಶನ ಇದೀಗ ಇಲ್ಲಿ ನಡೆಯಲಿದೆ. ಚಿತ್ರವನ್ನು ಹತ್ತಾರು ಬಾರಿ ನೋಡಿದ ಅಭಿಮಾನಿಗಳು ಥಟ್ಟನೆ ಗುರುತಿಸುವಂತೆ ಇಲ್ಲಿ ಚಿತ್ರಿತವಾಗಲಿದೆ ಎಂದು ಡಿಸೈನ್ಕಾನ್ನ ಕ್ಯುರೇಟರ್ ತಿಳಿಸಿದ್ದಾರೆ.. ನ.16ರಿಂದ 18 ರ ತನಕ ಈ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದ್ದಾರೆ.
Comments