ಹೈಬಜೆಟ್ ನಲ್ಲಿ ತಯಾರಾಗಲಿದೆ ರಕ್ಷಿತ್ ಶೆಟ್ಟಿ ನಿರ್ದೇಶನದ ಈ ಸಿನಿಮಾ..!!

ಸ್ಯಾಂಡಲ್ ವುಡ್ ನಲ್ಲಿ ಕಡಿಮೆ ಅವಧಿಯಲ್ಲಿ ಸಾಕಷ್ಟು ಹೆಸರು ಮಾಡಿದ ಸ್ಟಾರ್ ನಟರಲ್ಲಿ ರಕ್ಷಿತ್ ಶೆಟ್ಟಿ ಕೂಡ ಒಬ್ಬರು.. ಉಳಿದವರು ಕಂಡಂತೆ ಚಿತ್ರದ ನಿರ್ದೇಶನದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಟ್ರೆಂಡ್ ಕ್ರಿಯೆಟ್ ಮಾಡಿದ ನಿರ್ದೇಶಕ ಮತ್ತು ನಟನಾಗಿ ಹೆಸರು ಮಾಡಿದ ರಕ್ಷಿತ್ ಶೆಟ್ಟಿ ಇದೀಗ ಎರಡನೇ ಚಿತ್ರವನ್ನು ನಿರ್ದೇಶನ ಮಾಡಲು ಮುಂದಾಗಿದ್ದಾರೆ,.
ಸ್ವತಃ ರಕ್ಷಿತ್ ಶೆಟ್ಟಿ ಅವರೇ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಹೆಸರು ಪುಣ್ಯಕೋಟಿ.. ಸುಮಾರು 300 ವರ್ಷಗಳ ಹಿಂದಿನ ಸ್ಥಿತಿಗತಿ, ವಾತಾವರಣವನ್ನು ನೆನಪಿಸುವ ಚಿತ್ರ ಇದಾಗಿರುತ್ತದೆ. ಈ ವಿಚಾರವನ್ನು ರಕ್ಷಿತ್ ಶೆಟ್ಟಿ ಆಪ್ತ ಗೆಳೆಯನಾದ ರಿಷಬ್ ಶೆಟ್ಟಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಗೆಳೆಯನಿಗೆ ಶುಭಾಶಯವನ್ನು ಕೋರಿದ್ದಾರೆ. ಸುಮಾರು 100 ಕೋಟಿ ರೂಪಾಯಿ ಬಜೆಟ್ ನಲ್ಲಿ ತಯಾರಾಗುತ್ತಿರುವ ಅದ್ದೂರಿ ತಾರಾಗಣದ ಚಿತ್ರ ಈದಾಗಿರುತ್ತದೆ ಎನ್ನಲಾಗುತ್ತಿದೆ. ಮುಂದಿನ ವರ್ಷದ ಕೊನೆಯ ವೇಳೆಯಲ್ಲಿ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಒಟ್ಟಾರೆ ಮತ್ತೊಮ್ಮೆ ಸ್ಯಾಂಡಲ್ ವುಡ್ ನಲ್ಲಿ ಹೈ ಬಜೆಟ್ ಮೂವಿ ಬರೋದರಲ್ಲಿ ನೋ ಡೌಟ್..
Comments