ಶೃತಿ ಹರಿಹರನ್ ಮೇಲೆ ಗರಂ ಆದ ಮಹಿಳಾ ಆಯೋಗ..! ಕಾರಣ..?

ಮೀಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗವು ಶೃತಿ ಹರಿಹರನ್ ಅವರನ್ನು ವಿಚಾರಣೆಗೆ ಬರಲು ತಿಳಿಸಿದ್ದರು. ಆದರೆ ಮಹಿಳಾ ಆಯೋಗಕ್ಕೆ ಸರಿಯಾದ ಪ್ರತಿಕ್ರಿಯೆ ನೀಡದ ಶೃತಿ ಹರಿಹರನ್ ವಿರುದ್ಧ ಇದೀಗ ಮಹಿಳಾ ಆಯೋಗ ಗರಂ ಆಗಿದೆ. ಇಷ್ಟು ದಿನ ಮಾತನಾಡುತ್ತಿದ್ದ ಶೃತಿ ಹರಿಹರನ್ ಇದ್ದಕ್ಕಿದ್ದ ಹಾಗೆ ಸುಮ್ಮನಾಗಿರೋದು ಏಕೆ ಎಂಬ ಪ್ರಶ್ನೆಗಳು ಎಲ್ಲರನ್ನೂ ಕಾಡುತ್ತಿವೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ನಟಿ ಶೃತಿಗೆ ಪ್ರಕರಣದ ಕುರಿತು ಹೇಳಿಕೆ ನೀಡುವಂತೆ ಸೂಚಿಸಿದ್ದರು. ಆದರೆ ಶೃತಿ ಹರಿಹರನ್ ಆಯೋಗದ ಯಾವುದೇ ಫೋನ್ ಕರೆ, ಮೆಸೆಜ್ಗೆ ಸರಿಯಾಗಿ ಪ್ರತಿಕ್ರಿಯೆ ನೀಡದ ಕಾರಣ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಫುಲ್ ಗರಂ ಆಗಿದ್ದಾರೆ. ಶುಕ್ರವಾರ ಮಹಿಳಾ ಆಯೋಗದ ಸಂದೇಶ ನೋಡಿ ಕಂಗಾಲಾದ ನಟಿ ಶೃತಿ, ಆಯೋಗದ ಮುಂದೆ ಕ್ಷಮೆಯಾಚಿಸಿ ಸೋಮವಾರ ಹಾಜರಾಗುವ ಭರವಸೆಯನ್ನು ನೀಡಿದ್ದಾರಂತೆ.
Comments