ಚಿಂದಿ ಚಿತ್ರಾನ್ನಾ..ಬೂಂದಿ ಮೊಸರನ್ನ..! ಕೆಜಿಎಫ್ ಟ್ರೈಲರ್ ಸೂಪರ್ ಗುರು..!!
ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಚಿತ್ರವಾದ ಕೆಜಿಎಫ್ ಸಿನಿಮಾ ಟ್ರೈಲರ್ ಬಿಡುಗಡೆಯಾಗಿದೆ. ಯಶ್ ಅಭಿಮಾನಿಗಳಿಗೆ ದೀಪಾವಳಿಗೆ ಬಂಪರ್ ಗಿಫ್ಟ್ ಎಂಬಂತೆ ಕೆಜಿಎಫ್ ಟ್ರೈಲರ್ ರಿಲೀಸ್ ಆಗಿದೆ. ಕೆಜಿಎಫ್ ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ ... ಟ್ರೈಲರ್ ನೋಡಿಯೋ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಸಿನಿಮಾದಲ್ಲಿನ ರಾಕಿಂಗ್ ಸ್ಟಾರ್ ಯಶ್ ಅವರ ಮಾಸ್ ಲುಕ್ ಗೆ ಸಿನಿಮಾ ರಂಗವೇ ಸ್ಯಾಂಡಲ್ ವುಡ್ ನತ್ತ ಮುಖ ಮಾಡಿದೆ.
'ಕೆಜಿಎಫ್' ಸಿನಿಮಾದ ಟ್ರೈಲರ್ ಅನ್ನು ಇಂದು ಬೆಂಗಳೂರಿನ ಒರಿಯಾನ್ ಮಾಲ್’ನಲ್ಲಿ ಬಿಡುಗಡೆ ಮಾಡಲಾಯಿತು.. 'ಕೆಜಿಎಫ್' ಸಿನಿಮಾದ ಟ್ರೈಲರ್ ಅನ್ನು ಹಿರಿಯ ನಟರಾದ ರೆಬಲ್ ಸ್ಟಾರ್ ಅಂಬರೀಶ್ ಅವರು ಉದ್ಘಾಟನೆ ಮಾಡಿದರು. ಈ ಚಿತ್ರವನ್ನು `ಉಗ್ರಂ' ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದು, ಹೊಂಬಾಳೆ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗಿದೆ. ಇದೇ ಮೊದಲ ಬಾರಿಗೆ ಈ ಸಿನಿಮಾದಲ್ಲಿ ಯಶ್ ಜೊತೆ ಶ್ರೀ ನಿಧಿ ಶೆಟ್ಟಿ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಐಟಂ ಹಾಡಿಗೆ ಯಶ್ ಜೊತೆ ಮಿಲ್ಕಿ ಬ್ಯೂಟಿ ಕ್ವೀನ್ ತಮನ್ನಾ ಭಾಟಿಯಾ ಸಖತ್ ಆಗಿಯೇ ಸ್ಟೆಪ್ ಹಾಕಿದ್ದಾರೆ. ಟ್ರೈಲರ್ ಗೆ ಫಿದಾ ಆಗಿರೋ ಅಭಿಮಾನಿಗಳು ಸಿನಿಮಾಗೆ ಫಿದಾ ಆಗದೇ ಇರ್ತಾರ.. ಈ ಪ್ರಶ್ನೆಯ ಉತ್ತರಕ್ಕೆ ಸಿನಿಮಾ ರಿಲೀಸ್ ಆಗುವವರೆಗೂ ಕಾಯಲೇಬೇಕು.
Comments