ಸಾವಿನ ಬಳಿಕ ದೇಹದಾನ ಮಾಡಲು ಮುಂದಾದ "ಅಣ್ಣಾವ್ರ ಮಕ್ಕಳು"..!

ಕನ್ನಡ ಚಿತ್ರರಂಗ ಅಂದರೆ ಮೊದಲು ನೆನಪಾಗೋದೇ ವರನಟ ಡಾ. ರಾಜ್ ಕುಮಾರ್… ತಮ್ಮ ಸಾವಿನ ನಂತರ ಡಾ.ರಾಜ್ ಕುಮಾರ್ ಅವರು ತಮ್ಮ ಕಣ್ಣನ್ನು ದಾನ ಮಾಡಿ, ಮತ್ತೊಬ್ಬರ ಬಾಳಿಗೆ ಬೆಳಕಾಗಿ ತಮ್ಮ ಅಭಿಮಾನಿ ದೇವರುಗಳನ್ನು ಇನ್ನೊಬ್ಬರ ಮೂಲಕ ನೋಡುತ್ತಿದ್ದಾರೆ. ಯಾವಾಗಲೂ ರಾಜ್ ಕುಮಾರ್ ಅವರು ಅಭಿಮಾನಿಗಳೆ ದೇವರು ಎನ್ನುವುದಕ್ಕೆ ಇದು ಕನ್ನಡಿ ಹಿಡಿದಂತಿತ್ತು.ಇದೀಗ ಅವರ ಹಾದಿಯಲ್ಲೆ ಅವರ ಮಕ್ಕಳು ಕೂಡ ನಡೆಯುತ್ತಿದ್ದಾರೆ.
ಇದೆಲ್ಲದರ ನಡುವೆ ಅಪ್ಪ ಹಾಕಿಕೊಟ್ಟ ಹಾದಿಯಲ್ಲೇ ನಡೆಯುತ್ತಿರುವ 'ಅಣ್ಣಾವ್ರ ಮಕ್ಕಳಾ'ದ ಶಿವರಾಜ್ ಕುಮಾರ್ ರಾಘವೇಂದ್ರ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅಪ್ಪನ ಹಾದಿಯಲ್ಲೇ ನಡೆದು ಇತರರಿಗೆ ಮಾದರಿ ಆಗುತ್ತಿದ್ದಾರೆ. ಎಸ್.. ಈ ಮೂವರು ಸಹೋದರರು ದೇಹದಾನಕ್ಕೆ ಮುಂದಾಗಿದ್ದಾರಂತೆ. ಈ ಬಗ್ಗೆ ಕವಚ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಶಿವರಾಜ್ ಕುಮಾರ್ ಅವರು ಅಪ್ಪಾಜಿ ನೇತ್ರದಾನ ಮಾಡಿ, ಇತರರಿಗೆ ಬೆಳಕಾಗಿದ್ದಾರೆ. ಹಾಗಾಗಿಯೇ ನಾವು ಕೂಡ ದೇಹದಾನಕ್ಕೆ ಮುಂದಾಗಿದ್ದೇವೆ. ಸತ್ತ ನಂತರ ನಮ್ಮ ದೇಹವೂ ಉಪಯೋಗಕ್ಕೆ ಬರಲಿ ಎಂಬುದು ನಮ್ಮ ಆಸೆ ಆಗಿದೆ. ಹಾಗಾಗಿಯೇ ಇಂಥದ್ದೊಂದು ನಿರ್ಧಾರಕ್ಕೆ ಬಂದಿದ್ದೇವೆ' ಎಂದು ತಿಳಿಸಿದ್ದಾರೆ. ಈ ನಿರ್ಧಾರದಿಂದ ಸಾಕಷ್ಟು ಅಭಿಮಾನಿಗಳು ಕೂಡ ದೇಹದಾನಕ್ಕೆ ಮುಂದಾಗಿದ್ದಾರೆ.
Comments