ನಾನು ಆ ಸಿನಿಮಾ ನೋಡಲೇಬೇಕು ಎಂದ ಅಭಿನಯ ಚಕ್ರವರ್ತಿ ಸುದೀಪ್​..! ಅಷ್ಟಕ್ಕೂ ಯಾವುದು ಆ ಸಿನಿಮಾ..?

06 Nov 2018 4:23 PM | Entertainment
584 Report

ಸ್ಯಾಂಡಲ್ ವುಡ್ ಮೋಸ್ಟ್ ಹ್ಯಾಂಡ್ಸಮ್ ಹೀರೋ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ​  ನಾನು ಆ ಸಿನಿಮಾ ನೋಡಲೇ ಬೇಕು , ಅವರನ್ನ ಇಲ್ಲಿಯವರೆಗೂ ನೋಡಿದ್ದೇ ಬೇರೆ, ಆ ಚಿತ್ರದಲ್ಲಿ ನೋಡೋದೇ ಬೇರೆ ಹೀಗೆಂದು ಸುದೀಪ್​ ಹೇಳಿದ್ದಾರೆ.  ಅರೇ ಹೌದಾ.. ಅಷ್ಟಕ್ಕೂ ಸುದೀಪ್ ಯಾವ ಹೀರೋ ಬಗ್ಗೆ ಮಾತನಾಡುತ್ತಿದ್ದಾರೆ ಅಂತ ಯೋಚನೆ ಮಾಡುತ್ತಿದ್ದೀರಾ… ಎಸ್.. ಸರ್ವರ್​ ಸೋಮಣ್ಣ  ಖ್ಯಾತಿಯ ನವರಸ ನಾಯಕ ಜಗ್ಗೇಶ್​  ಅಭಿಯದ ಹೊಸ ಸಿನಿಮಾ 8 ಎಂಎಂ ಸಿನಿಮಾ ಬಗ್ಗೆ ಸುದೀಪ್ ಮಾತನಾಡಿದ್ದಾರೆ. ಈಗಾಗಲೇ ಸಿನಿಮಾ ರಿಲೀಸ್​ಗೆ ಸಿದ್ಧವಾಗಿದೆ. ಡಿಫರೆಂಟ್​ ರೋಲ್​ನಲ್ಲಿ  ಜಗ್ಗೇಶ್​ ಕಾಣಿಸಿಕೊಂಡಿದ್ದು ಸಿಕ್ಕಾಪಟ್ಟೆ ಕ್ರೇಜ್​ ಕ್ರಿಯೇಟ್ ಮಾಡಿದೆ ಎಂದಿದ್ದಾರೆ.

ಇಲ್ಲಿಯವರೆಗೂ ಜಗ್ಗೇಶ್ ಅವರನ್ನು ಹಾಸ್ಯ ನಟನಾಗಿ ಕಾಣಿಸಿಕೊಂಡಿದ್ದರು.. ನವರಸಗಳನ್ನು ರೂಢಿಸಿಕೊಂಡಿದ್ದ ಜಗ್ಗೇಶ್​ ಸದ್ಯ ಜೇಮ್ಸ್​ ಬಾಂಡ್​  ಆಗಿ ನಟಿಸಿರುವ ಚಿತ್ರ ಸಖತ್ ಎಕ್ಸೈಟ್​ಮೆಂಟ್​ ಕ್ರಿಯೇಟ್​ ಮಾಡಿದೆ. 8ಎಂಎಂ ಬಗ್ಗೆ ಸುದೀಪ್​, ನಾನು ಜಗ್ಗೇಶ್​ ಅವರ ಈ ಸಿನಿಮಾ ನೋಡಲೇಬೇಕು. ನಾನು ಇಲ್ಲಿಯವರೆಗೆ ಜಗ್ಗೇಶ್ ಸಿನಿಮಾ ನೋಡಿದ್ದ  ಬೇರೆ, ಆದರೆ ಈ ಬಾರಿ ವಿತೌಟ್​ ಕಾಮಿಡಿ ಜಗ್ಗೇಶ್​  ನಟಿಸಿರೋದು ಸಖತ್ ಕ್ಯೂರ್ಯಾಸಿಟಿ ಕ್ರಿಯೇಟ್ ಮಾಡಿದೆ ಎಂದಿದ್ದಾರೆ.  ಜಗ್ಗೇಶ್​ ಅತ್ಯುತ್ತಮ ಕಾಮಿಡಿ ಆ್ಯಕ್ಟರ್​​. ಆದ್ರೆ 8 ಎಂ ಎಂ ಸಿನಿಮಾದಲ್ಲಿ ಡಿಫರೆಂಟ್ ರೋಲ್​ನಲ್ಲಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಜಗ್ಗೇಶ್​​ ಅವರ ಇನ್ನೊಂದು ಅವತಾರವನ್ನು ಕಾಣಬಹುದಾಗಿದೆ. ನಾನೂ ಕೂಡ ಸಿನಿಮಾ ನೋಡಲು ಕುತೂಹಲಕಾರಿ ಆಗಿದ್ದೇನೆ. ನಿಮ್ಮ ಸಿನಿಮಾಗೆ ನನ್ನ ಶುಭಾಶಯಗಳು ಜಗ್ಗೇಶ್​ ಸರ್​​ ಎಂದು ಟ್ವೀಟ್ ಮೂಲಕ ಶುಭಾಷಯ ತಿಳಿಸಿದ್ದಾರೆ.

Edited By

Manjula M

Reported By

Manjula M

Comments