‘ಸುಪಾರಿ ಕೊಲೆ’ ಗೆ ಕೈ ಜೋಡಿಸಿದ್ರಾ ಪ್ರಿಯಾಂಕ ಉಪೇಂದ್ರ..!!

06 Nov 2018 3:13 PM | Entertainment
633 Report

ಚಂದನವನದ ಮೋಸ್ಟ್ ಬ್ಯೂಟಿಫುಲ್ ನಟಿಮಣಿಯರ ಸಾಲಿಗೆ H2O ಬೆಡಗಿ ಪ್ರಿಯಾಂಕ ಉಪೇಂದ್ರ ಕೂಡ ಸೇರಿಕೊಳ್ಳುತ್ತಾರೆ..  H2O ಸಿನಿಮಾದಿಂದ ಹೂವಿನ ಚೆಲುವೆ ಅಂತಾನೇ ಫೇಮಸ್ ಆದ ನಟಿ.. ಸಿನಿರಸಿಕರ ಮನಸ್ಸನ್ನು ಬಹು ಬೇಗ ಗೆದ್ದ ನಟಿ.. ಇದೀಗ ಬ್ಯೂಟಿಫುಲ್ ನಟಿ ಪ್ರಿಯಾಂಕ ಉಪೇಂದ್ರ ಮತ್ತೊಂದು ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. . ಆ ಸಿನಿಮಾದ ಹೆಸರು  'ಸುಪಾರಿ ಕೊಲೆ'. ಈ ಸಿನಿಮಾಗೆ ದಯಾಳ್ ಪದ್ಮನಾಭನ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಜ್ಯಾಕ್ ಮಂಜುನಾಥ್  ಬಂಡವಾಳವನ್ನು ಹೂಡುತ್ತಿದ್ದಾರೆ.  

ದಯಾಳ್ ಪದ್ಮನಾಭನ್​​ 'ಸುಪಾರಿ ಕೊಲೆ' ನಾಟಕದ ಬಗ್ಗೆ ತಿಳಿದ ಕೂಡಲೇ ತಕ್ಷಣ ಪ್ರಿಯಾಂಕ ಉಪೇಂದ್ರ ಅವರನ್ನು ಸಂಪರ್ಕಿಸಿ ಕಥೆ ಹೇಳಿದ್ದಾರೆ. ಈ ಕಥೆ ಪ್ರಿಯಾಂಕಾ ಉಪೇಂದ್ರ ಅವರಿಗೆ ತುಂಬ ಇಷ್ಟ ಆಗಿದೆ. ಪ್ರಿಯಾಂಕಾ ಈ ಚಿತ್ರದಲ್ಲಿ 'ಸುಪಾರಿ ಕೊಲೆ' ನಾಟಕದಲ್ಲಿ ಬರುವ ಅರ್ಚನಾ ಪಾತ್ರ ಮಾಡಲಿದ್ದಾರಂತೆ.. ಅವರು ಈ ಸಿನಿಮಾದಲ್ಲಿ ಗಂಡನನ್ನು ಕೊಲೆ ಮಾಡಿಸಲು ಸುಪಾರಿಯನ್ನು ನೀಡುತ್ತಾರೆ. ಆಮೇಲೆ ತನ್ನನ್ನು ಕೊಲೆ ಮಾಡು ಅಂತಲೂ ಕೂಡ ಸುಪಾರಿ ಕೊಲೆಗಡುಕನ ಬೆನ್ನು ಬೀಳುತ್ತಾರೆ. 'ಸುಪಾರಿ ಕೊಲೆ' ಸಿನಿಮಾವು ಮುಂದಿನ ವರ್ಷ ಸೆಟ್ಟೇರುತ್ತದೆ.

Edited By

Manjula M

Reported By

Manjula M

Comments