ದರ್ಶನ್ ಅವರಿಂದ ಅಭಿಮಾನಿಗಳಿಗೆ ಸಿಕ್ತಿದೆ ದೀಪಾವಳಿ ಗಿಫ್ಟ್
ಸ್ಯಾಂಡಲ್ ವುಡ್’ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇಂದು ದೀಪಾವಳಿ ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಬಂಪರ್ ಗಿಫ್ಟ್ ನೀಡಲು ನಿರ್ಧಾರ ಮಾಡಿದ್ದಾರೆ. ದರ್ಶನ್ ಅವರ 53ನೇ ಸಿನಿಮಾದ ಶೂಟಿಂಗ್ ಕೆಲಸಗಳು ನಡೆಯುತ್ತಿದ್ದು, ಈ ಮಧ್ಯೆ ಸಿನಿಮಾ ತಂಡ ಸಿನಿಮಾದ ಥೀಮ್ ಪೋಸ್ಟರ್ ಬಿಡುಗಡೆ ಮಾಡಲು ಚಿಂತನೆ ಮಾಡಿದೆಯಂತೆ. ಈ ಹಿನ್ನೆಲೆಯಲ್ಲಿ ದರ್ಶನ್ ಅವರು ಟ್ವೀಟ್ ಮಾಡುವ ಮೂಲಕ ದೀಪಾವಳಿ ಪ್ರಯುಕ್ತ ಸಿನಿಮಾ ಥೀಮ್ ಪೋಸ್ಟರ್ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು, “ದೀಪಾವಳಿ ಹಬ್ಬದ ಪ್ರಯುಕ್ತ ಸಂಜೆ 6 ಗಂಟೆಗೆ ನನ್ನ ಟ್ವಿಟ್ಟರ್/ಫೇಸ್ ಬುಕ್ ಖಾತೆಯಲ್ಲಿ #D53 ಚಿತ್ರದ ಥೀಮ್ ಪೋಸ್ಟರ್ ಬಿಡುಗಡೆ ಮಾಡಲಿದ್ದೇನೆ. ನಿಮ್ಮ ಪ್ರೀತಿ-ಅಭಿಮಾನಕ್ಕಾಗಿ ನಾ ಸದಾ ಚಿರಋಣಿ – ನಿಮ್ಮ ದಾಸ ದರ್ಶನ್” ಎಂದು ಬರೆದು ಟ್ವೀಟ್’ನಲ್ಲಿ ಬರೆದುಕೊಂಡಿದ್ದಾರೆ. ದರ್ಶನ್ ಟ್ವೀಟ್ ಮಾಡಿದ ತಕ್ಷಣ ಅಭಿಮಾನಿಗಳು ಕೂಡ ಕಾಯುತ್ತಿದ್ದೇವೆ ಬಾಸ್ ಎಂದು ರೀಟ್ವೀಟ್ ಮಾಡುತ್ತಿದ್ದಾರೆ. ಇತ್ತೀಚೆಗೆಷ್ಟೆ ದರ್ಶನ್ ಅವರು ತಮ್ಮ ಮಗ ವಿನೀಶ್ ಬರ್ತ್ ಡೇ ಪಾರ್ಟಿ ಯನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದರು. ಬರ್ತ್ ಡೇ ಪಾರ್ಟಿಗೆ ಸಂಬಂಧಿಕರು ಮತ್ತು ಸಿನಿಮಾ ರಂಗದ ಸ್ನೇಹಿತರು ಬಂದಿದ್ದರು.
Comments