`ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ' ಸಿನಿಮಾ ನಿರ್ಮಾಪಕರ ಬಂಧನ ..!

`ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ' ಸಿನಿಮಾ ನಿರ್ಮಾಪಕರಾದ ಆನಂದ್ ಅಪ್ಪುಗೋಳ್ ಅವರನ್ನ ಮತ್ತೆ ಅರೆಸ್ಟ್ ಮಾಡಲಾಗಿದೆ. ಆನಂದ್ ಅಪ್ಪುಗೋಳ್ ಅವರು ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಸೊಸೈಟಿಯಿಂದ ಬಹುಕೋಟಿ ಠೇವಣಿ ವಂಚನೆಯನ್ನು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕುರಿತು ಖಡೇ ಬಜಾರ್ ಪೊಲೀಸರು ಕಾರ್ಯಚರಣೆ ನಡೆಸಿ ಕಾಂತ್ರಿವೀರ ಸಂಗೊಳ್ಳಿರಾಯಣ್ಣ ಸಿನಿಮಾದ ನಿರ್ಮಾಪಕರನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ನಂತರ ಸೊಸೈಟಿ ಅಧ್ಯಕ್ಷರಾಗಿದ್ದ ಆನಂದ್ ಅಪ್ಪುಗೋಳ್’ರನ್ನು ಸೋಮವಾರ ತಡರಾತ್ರಿ ಬಂಧಿಸಲಾಗಿದೆ.
ಸಂಗೊಳ್ಳಿ ರಾಯಣ್ಣ ಸೊಸೈಟಿಯಲ್ಲಿ ನಾವು ಹಣ ಠೇವಣಿ ಮಾಡಿದ್ದೆವು. ಆದರೆ ಆನಂದ್ ಅಪ್ಪುಗೋಳ್ ಅವರು ವಂಚನೆ ಮಾಡಿದ್ದಾರೆ ಎಂದು ಗ್ರಾಹಕರು ಆರೋಪ ಮಾಡಿದ್ದಾರೆ., ಸೋಮವಾರ ನೂರಾರು ಗ್ರಾಹಕರಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ನಮ್ಮ ಹಣ ನಮಗೆ ಕೊಡಿಸುವಂತೆ ಗ್ರಾಹಕರು ತಮ್ಮ ಅಳಲು ಮತ್ತು ನೋವನ್ನು ತೋಡಿಕೊಂಡಿದ್ದರು. ಆದ್ದರಿಂದ ಪೊಲೀಸರು ಕಾರ್ಯಚರಣೆ ನಡೆಸಿ ತಡರಾತ್ರಿ ಅಪ್ಪುಗೋಳ್ ಅವರನ್ನು ಬಂಧಿಸಿದ್ದಾರೆ ಎಂದು ಹೇಳಲಾಗುತ್ತಿದೆ.
Comments