10 ಕೋಟಿ ಆಫರ್ ತಿರಸ್ಕರಿಸಿದ ನಟ ನೀನಾಸಂ ಸತೀಶ್..!

ಇತ್ತಿಚಿಗೆ ಸ್ಯಾಂಡಲ್ ವುಡ್ ಸಾಕಷ್ಟು ಹೆಸರು ಮಾಡಿರುವ ನಾಯಕರು ಸಾಕಷ್ಟು ಜನ ಇದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಬಾರೀ ಡಿಮ್ಯಾಂಡ್ ಇರುವ ನಟರಲ್ಲಿ ನೀನಾಸಂ ಸತೀಶ್ ಕೂಡ ಒಬ್ಬರು, ಇದೀಗ ಅವರು ನಟಿಸಿದ ಚಂಬಲ್ ಚಿತ್ರಕ್ಕೆ 10 ಕೋಟಿ ಆಫರ್ ಬಂದರೂ ಅದನ್ನು ತಿರಸ್ಕರಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.. ಲೂಸಿಯಾ ಚಿತ್ರದಲ್ಲಿ ಅಭಿನಯಿಸುವುದರ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಮತ್ತು ಜನರಲ್ಲಿ ಭರವಸೆಯನ್ನು ಮೂಡಿಸಿದ ನಟ ನೀನಾಸಂ ಸತೀಶ್ … ಇತ್ತಿಚಿನ ಅವರ ಅಯೋಗ್ಯ ಚಿತ್ರವು ಸಾಕಷ್ಟು ಹೆಸರನ್ನು ಮಾಡಿದೆ..
ಚಂದನವನದಲ್ಲಿ ಲವ್ ಇನ್ ಮಂಡ್ಯ, ಕ್ವಾಟ್ಲೆ ಸತೀಶ ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿ ಜನ ಮನಗೆದ್ದಿದ್ದಾರೆ. ಇತ್ತೀಚಿಗೆ ತೆರೆಕಂಡ ಸತೀಶ್ ನಟನೆಯ ಅಯ್ಯೋಗ ಚಿತ್ರ ಅವರ ಡಿಮ್ಯಾಂಡ್ ಅನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.. ಇದೀಗ ನೀನಾಸಂ ಸತೀಶ್ ಅವರ ಮುಂದಿನ ಸಿನಿಮಾ ಚಂಬಲ್ ಬಿಡುಗಡೆಗೆ ಮುನ್ನವೇ ಭಾರಿ ಬೇಡಿಕೆಯನ್ನು ಹುಟ್ಟು ಹಾಕಿದೆ. ನೆಟ್‍ಫ್ಲಿಕ್ಸ್ ನವರು 10 ಕೋಟಿ ರೂ. ಕೊಟ್ಟು ಈ ಚಿತ್ರವನ್ನು ಖರೀದಿ ಮಾಡಲು ಮುಂದಾಗಿದ್ದಾರೆ. ಆದರೆ ಈ ಆಫರ್ ಅನ್ನು ನೀನಾಸಂ ಸತೀಶ್ ತಿರಸ್ಕರಿಸಿದ್ದಾರೆ. ಕಾರಣ ನೆಟ್‍ಫ್ಲಿಕ್ಸ್ ನವರು ಈ ಚಿತ್ರವನ್ನು ಖರೀದಿಸಿದ ನಂತರ ಥಿಯೇಟರುಗಳಿಗೆ ರಿಲೀಸ್ ಮಾಡಬಾರದು ಅನ್ನೋ ಷರತ್ತು ಹಾಕಿದೆ. ಇದು ನಟ ಸತೀಶ್ ಅವರಿಗೆ ಇಷ್ಟವಾಗದೇ ಇರುವುದರಿಂದ ಈ ಆಫರ್ ಬೇಡ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ..
Comments