ಸಪ್ತಪದಿ ತುಳಿಯಲು ಸಿದ್ದವಾಗ್ತಿದ್ದಾರೆ ಹೆಬ್ಬುಲಿ ನಾಯಕಿ..! ಹುಡುಗ ಯಾರ್ ಗೊತ್ತಾ..?

ಸಿನಿಮಾರಂಗದಲ್ಲಿ ಮದುವೆಯ ಹಬ್ಬ ಶುರುವಾಗಿದೆ ಅನ್ನಿಸುತ್ತಿದೆ.. ಇಂದು ಕಡೆ ಪಿಗ್ಗಿ ಮದುವೆಗೆ ಸಿದ್ದವಾದರೆ ಮತ್ತೊಂದು ಕಡೆ ದೀಪಿಕಾ… ಮತ್ತೆ ಯಾರು ಮದುವೆಗೆ ಸಿದ್ದವಾಗ್ತಿದ್ದಾರೆ ಅನ್ಕೊತ್ತಿದ್ದೀರಾ..ಅದೇ ರೀ ಹೆಬ್ಬುಲಿ ಚಿತ್ರದ ನಟಿ ಅಮಲಾ ಪೌಲ್.. ಇದೀಗ ಅವರು ಕೂಡ ಹಸೆಮಣೆ ಏರಲು ಸಿದ್ದರಾಗಿದ್ದಾರೆ ಎನ್ನಲಾಗಿದೆ.. ಬೇರೆ ಬೇರೆ ಭಾಷೆಗಳ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಈಕೆ ಕನ್ನಡದ ಹೆಬ್ಬುಲಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು..
ಅಮಲಾ ಪೌಲ್ ಗೆ ಈಗಾಗಲೇ ಮದುವೆಯಾಗಿ ಎರಡನೇ ಮದುವೆಯಾಗಲು ಸಿದ್ದರಾಗಿದ್ದಾರೆ ಎನ್ನಲಾಗಿದೆ.ನಿರ್ದೇಶಕ ವಿಜಯ್ ರವರನ್ನು 2014 ರಲ್ಲಿ ವಿವಾಹವಾಗಿದ್ದರು. ಮೂರು ವರ್ಷ ಸಾಂಸಾರಿಕ ಜೀವನ ನಡೆಸುವಷ್ಟರಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಬೇರೆ ಬೇರೆಯಾಗಿದ್ದಾರೆ. ನಂತರ ಅಮಲಾ ಪೌಲ್ ಸಿನಿಮಾದಲ್ಲಿ ಬ್ಯುಸಿಯಾದರು. ಕನ್ನಡದಲ್ಲಿ ಕಿಚ್ಚ ಸುದೀಪ್ ಜೊತೆ ಹೆಬ್ಬುಲಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಬೇರೆ ಬೇರೆ ಭಾಷೆಗಳಲ್ಲೂ ಸಿನಿಮಾ ಮಾಡಿದ್ದಾರೆ. ಇದೀಗ ಮತ್ತೊಂದು ಮದುವೆಯಾಗಲು ಸಿದ್ದರಾಗಿದ್ದಾರೆ. ಹುಡುಗ ಯಾರು ಅನ್ನುವ ಗುಟ್ಟು ಮಾತ್ರ ಅಮಲ ಪೌಲ್ ಬಿಟ್ಟು ಕೊಟ್ಟಿಲ್ಲ!
Comments