ಶೃತಿ - ಅರ್ಜುನ್ ಮೀಟೂ ಪ್ರಕರಣಕ್ಕೆ ಸಿಕ್ಕಿದೆ "ಪೊಲಿಟಿಕಲ್ ಟ್ವಿಸ್ಟ್"..!

ಮೀಟೂ ಆರೋಪವನ್ನು ಎದುರಿಸುತ್ತಿರುವ ಅರ್ಜುನಾ ಸರ್ಜಾ ಅವರು ಇಂದು ವಿಚಾರಣೆಗೆ ಬೆಂಗಳೂರಿನ ಕಬ್ಬನ್ ಪಾರ್ಕ್ ಪೋಲಿಸ್ ಠಾಣಾಧಿಕಾರಿ ಮುಂದೆ ಹಾಜರಾಗಿದ್ದಾರೆ.. ವಿಸ್ಮಯ ಶೂಟಿಂಗ್ ವೇಳೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅರ್ಜುನ್ ಸರ್ಜಾ, ತಮ್ಮ ಮೇಲೆ ಕೇಳಿ ಬಂದಿರುವ ಆರೋಪಕ್ಕೆ ಸಂಬಂಧಪಟ್ಟಂತೆ ಮಾಹಿತಿ ನೀಡಿದ್ದಾರೆ. ವೇಳೆ ಸಮಯದಲ್ಲಿ ನಟ ಅರ್ಜುನ್ ಸರ್ಜಾ ಅವರ ವಿಚಾರಣೆ ನಡೆಯುತ್ತಿದ್ದರೆ, ಇತ್ತ ಠಾಣೆಗೆ ಬಿಜೆಪಿ ಎಂಎಲ್ ಸಿ ತೇಜಸ್ವಿನಿ ರಮೇಶ್ ಅವರು ಹಾಜರಾಗಿ ಈ ಮೂಲಕ ಶೃತಿ - ಅರ್ಜುನ್ ಸರ್ಜಾ ಮೀಟೂ ಪ್ರಕರಣ 'ಪೊಲಿಟಿಕಲ್ ಟ್ವಿಸ್ಟ್' ನೀಡಿದ್ದಾರೆ...
ಎಂಎಲ್ ಸಿ ಆಗಿರುವ ತೇಜಸ್ವಿನಿ ರಮೇಶ್ ಅವರು ಎಡಪಂಥಿಯರು ಅರ್ಜುನ್ ಸರ್ಜಾ ಮೂಲಕ ಮೋದಿಯನ್ನು ಟಾರ್ಗೆಟ್ ಮಾಡಿದ್ದಾರೆ. ಅರ್ಜುನಾ ಸರ್ಜಾ ತಂದೆ ಮೂಲತಃ ಆರ್‍ಎಸ್‍ಎಸ್ ನವರಾಗಿದ್ದಾರೆ.ಶೃತಿ ಬೆಂಬಲಕ್ಕೆ ನಿಂತಿರುವವರೆಲ್ಲ ಎಡಪಂಥಿಯರು ಆಗಿದ್ದಾರೆ. ಪ್ರಕಾಶ್ ರೈ, ಚೇತನ್, ಕವಿತಾ ಲಂಕೇಶ್ ಎಲ್ಲರೂ ಕೂಡ ಮೋದಿ ವಿರೋಧಿಗಳೇ ಆಗಿದ್ದಾರೆ. ಇವರೆಲ್ಲಾ ಸೇರಿಕೊಂಡು ಅರ್ಜುನ್ ಸರ್ಜಾ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ ಅಂತ ತೇಜಸ್ವಿನಿ ರಮೇಶ್ ಅವರು ಪೋಲಿಸರಿಗೆ ಹೇಳಿದ್ದಾರೆ ಎನ್ನಲಾಗಿದೆ. ಇದೀಗ ಈ ಮೀಟೂ ಪ್ರಕರಣಕ್ಕೆ ಪೊಲಿಟಿಕಲ್ ಟ್ವಿಸ್ಟ್ ಸಿಕ್ಕಿರೋದು ಸಾಕಷ್ಟು ಕುತೂಹಲವನ್ನು ಕೆರಳಿಸಿದೆ..
Comments