ಪ್ರೇಮದ ಸುಳಿಯಲ್ಲಿ ಮತ್ತೆ ಸಿಕ್ಕಿಹಾಕಿಕೊಂಡ್ರಾ ಕಿರಿಕ್ ಪಾರ್ಟಿಯ ಕರ್ಣ…!  ಸ್ಯಾಂಡಲ್ವುಡ್’ನ ಆ ಸ್ಟಾರ್ ಯಾರು..!?

05 Nov 2018 9:43 AM | Entertainment
375 Report

ಸ್ಯಾಂಡಲ್’ವುಡ್ನಲ್ಲಿ ನಟ ನಟಿಯರ ಲವ್ ಸ್ಟಾರ್ ಆದ್ರೂ ಸುದ್ದಿನೇ, ಮದುವೆ ಆದ್ರೂ ಸುದ್ದಿನೇ, ಮಕ್ಕಳಾದ್ರೂ ಸುದ್ದಿನೇ.. ಅದೇ ರೀತಿ ಬ್ರೇಕ್ ಅಫ್ ಆದ್ರೂ ಕೂಡ ಸುದ್ದಿನೇ… ಅರೇ ಯಾಕಪ್ಪ ಇದನ್ನೆಲ್ಲಾ ಹೇಳ್ತಿದ್ದಾರಲ್ಲ ಅನ್ಕೊಂಡ್ರ… ಇತ್ತಿಚಿಗೆ ಸ್ಯಾಂಡಲ್ ವುಡ್ ನ ಕಿರಿಕ್ ಪಾರ್ಟಿಯ ಜೋಡಿ ಎಂದರೆ ಕರ್ಣ ಮತ್ತು ಸಾನ್ವಿಯ ಲವ್ ಬ್ರೇಕ್ ಅಫ್ ಆಗಿದ್ದು ಎಲ್ಲರಿಗೂ ಕೂಡ ತಿಳಿದೆ ಇದೆ…ಇದರ ನಡುವೆ ಅನೇಕ ರೀತಿಯ ಗಾಸಿಪ್’ಗಳು ಕೇಳಿ ಬರುತ್ತಿದ್ದವು.. ಇದೀಗ ರಕ್ಷಿತ್ ಶೆಟ್ಟಿಯ ಮತ್ತೊಂದು ಸುದ್ದಿ ಸಖತ್ ಸದ್ದು ಮಾಡುತ್ತಿದೆ..

ನಟ ರಕ್ಷಿತ್ ಶೆಟ್ಟಿ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರ ಬ್ರೇಕ್ ಅಪ್ ಸುದ್ದಿ ಭಾರೀ ಸದ್ದು ಮಾಡಿತ್ತು. ಇದೀಗ ರಕ್ಷಿತ್ ಶೆಟ್ಟಿ ಮತ್ತೆ ಲವ್ ನಲ್ಲಿ ಬಿದ್ದಿದ್ದಾರಾ ಎಂಬ ಮಾತುಗಳು ಎಲ್ಲೆಡೆ ಕೇಳಿಬರುತ್ತಿವೆ.ಸಾಮಾಜಿಕ ಜಾಲತಾಣದಲ್ಲಿ ನಟ ರಕ್ಷಿತ್ ಮತ್ತು ಮೇಘನಾ ಗಾಂವ್ಕರ್ ಅವರ ಫೋಟೋವೊಂದು ಹರಿದಾಡುತ್ತಿದೆ. ಈ ಪೋಟೋದಲ್ಲಿ ಇಬ್ಬರು ಅಕ್ಕಪಕ್ಕ ಕುಳಿತಿದ್ದು, ಎಲ್ಲರಲ್ಲೂ ಪ್ರಶ್ನೆ ಮೂಡಿಸುವಂತಿದೆ.ನಟಿ ಮೇಘನಾ ಗಾಂವ್ಕರ್ ಅವರು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ರಕ್ಷಿತ್ ಶೆಟ್ಟಿ ಜೊತೆಗೆ ಇರುವ ಪೋಟೋವನ್ನು ಅಪ್ಲೋಡ್ ಮಾಡಿದ್ದಾರೆ. ಮೇಘನಾ ಅವರು ಫೋಟೋವನ್ನು ಅಪ್ಲೋಡ್ ಮಾಡಿದ ತಕ್ಷಣ ಅಭಿಮಾನಿಗಳು ಅನೇಕ ರೀತಿಯಲ್ಲಿ ಕಮೆಂಟ್ ಅನ್ನು ಕೂಡ ಮಾಡುತ್ತಿದ್ದಾರೆ. ನೈಸ್ ಕಪಲ್, ಸೂಪರ್ ಜೋಡಿ, ಮೇಡ್ ಫಾರ್ ಈಚ್ ಅದರ್, ಬೇಗ ನೀವಿಬ್ಬರು ಮದುವೆ ಮಾಡಿಕೊಳ್ಳಿ ಎಂದು ಅನೇಕರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಒಟ್ಟಾರೆ ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಪ್ರೇಮ್ ಕಹಾನಿ ಬರೋದರಲ್ಲಿ ನೋ ಡೌಟ್ ಅನ್ಸುತ್ತೆ..

Edited By

Manjula M

Reported By

Manjula M

Comments