ನೋವಿನಲ್ಲಿ ಕರ್ತವ್ಯ ನಿಭಾಯಿಸಿದ ಚಾಲೆಂಜಿಂಗ್ ಸ್ಟಾರ್

ಇತ್ತಿಚಿಗಷ್ಟೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕಾರ್ ಅಪಘಾತ ಸಂಭವಿಸಿದ್ದು ಇದೀಗ ಅವರು ವಿಶ್ರಾಂತಿ ಪಡೆಯುತ್ತಿರುವುದು ಎಲ್ಲರಿಗೂ ಕೂಡ ತಿಳಿದೆ ಇದೆ. ಆದರೆ ದರ್ಶನ್ ನೋವಿನಲ್ಲೂ ಕೂಡ ತಮ್ಮ ಕರ್ತವ್ಯವನ್ನು ಮಾಡಿದ್ದಾರೆ ಎನ್ನುವುದು ಹೆಮ್ಮೆಯ ವಿಷಯ..ದರ್ಶನ್ ಅವರು ಅರಣ್ಯ ಇಲಾಖೆಯ ರಾಯಭಾರಿಯಾಗಿದ್ದಾರೆ. ಹಾಗಾಗಿ ಅವರು ಆಗಾಗ ಅರಣ್ಯಗಳಿಗೆ ಹೋಗಿ ಪ್ರಾಣಿ, ಪಕ್ಷಿ ಮತ್ತು ಪ್ರಕೃತಿಯನ್ನು ವೀಕ್ಷಣೆ ಮಾಡಬೇಕು. ಇದು ಅವರ ಕರ್ತವ್ಯ ಕೂಡ ಆಗಿತ್ತು...
ಆದರೆ ಇತ್ತೀಚೆಗೆ ದರ್ಶನ್ ಅವರಿಗೆ ಕಾರ್ ಅಪಘಾತವಾಗಿ ಚಿಕಿತ್ಸೆ ಪಡೆದು ವಿಶ್ರಾಂತಿಯಲ್ಲಿದ್ದರು..ಆದ್ದರಿಂದ ಅವರು ಅರಣ್ಯವನ್ನು ವೀಕ್ಷಣೆ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳುತ್ತಿದ್ದರು. ಆದರೆ ನಟ ದರ್ಶನ್ ತಮ್ಮ ಗಾಯದ ನೋವಿನಲ್ಲೂ ಕೂಡ ಕಾಡಿಗೆ ಹೋಗಿ ವೀಕ್ಷಣೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಕೈಯಲ್ಲಿ ಕ್ಯಾಮೆರಾ ಹಿಡಿದು ಪ್ರಕೃತಿಯ ಸೊಬಗನ್ನು ಸೆರೆ ಹಿಡಿದಿದ್ದಾರೆ. ಸಂತಸದಿಂದ ಅರಣ್ಯದಲ್ಲಿ ಸುತ್ತಾಡಿದ್ದಾರೆ. ಅರಣ್ಯದಲ್ಲಿ ಸುತ್ತಾಡುತ್ತಿದ್ದ ಫೋಟೋಗಳನ್ನು ಅವರ ಅಭಿಮಾನಿಗಳು ತೆಗೆದು ಟ್ಟಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಒಟ್ಟಾರೆ ದರ್ಶನ್ ಅವರಿಗೆ ಇರುವ ಪ್ರಾಣಿ ಪ್ರೀತಿ ಇದರಲ್ಲೆ ತಿಳಿಯುತ್ತದೆ.
Comments