‘ಬಿಗ್ ಬಿ’ ಗೆ ನೋಟಿಸ್ ಜಾರಿ ಮಾಡಿದ ದೆಹಲಿ ಬಾರ್ ಕೌನ್ಸಿಲ್..!
ವಕೀಲರ ಉಡುಗೆಗೆ ಜಾಹೀರಾತೊಂದರಲ್ಲಿ ಅಗೌರವ ತೋರಿದ ಕಾರಣಕ್ಕೆ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರಿಗೆ ದೆಹಲಿ ಬಾರ್ ಕೌನ್ಸಿಲ್ ನೋಟಿಸ್ ಜಾರಿ ಮಾಡಿದೆ. ಎವರೆಸ್ಟ್ ಮಸಾಲೆ ಜಾಹೀರಾತಿನಲ್ಲಿ ಅಮಿತಾಭ್ ಬಚ್ಚನ್ ವಕೀಲ ಉಡುಪಿನಲ್ಲಿ ಕಾಣಿಸಿಕೊಂಡಿದ್ದರು. ಇದರ ಹಿನ್ನಲೆಯಲ್ಲಿ ಅಮಿತಾಭ್ ಬಚ್ಚನ್ ಅವರು ವಕೀಲ ಉಡುಗೆಗೆ ಅಗೌವರವನ್ನು ಸೂಚಿಸಿದ್ದಾರೆ ಎಂದು ಆರೋಪಿಸಿ ಬಾರ್ ಕೌನ್ಸಿಲ್ ನೋಟಿಸ್ ಜಾರಿ ಮಾಡಿದೆ.
ಜಾಹೀರಾತು ಮಾಡುವ ಸಂದರ್ಭದಲ್ಲಿ ವಕೀಲ ಉಡುಗೆಗಳನ್ನು ಬಳಸುವುದಕ್ಕೂ ಮೊದಲೇ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿಲ್ಲ. ಅಧಿಕಾರ ಮತ್ತು ವಿವೇಚನೆ ಇಲ್ಲದೆಯೇ ಜಾಹೀರಾತು ನಿರ್ಮಿಸಿ, ಅದನ್ನು ಪ್ರಸಾರ ಮಾಡಿರುವ ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಬಾರ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ದೇಶದ ಇತರೆ ಎಲ್ಲಾ ವಕೀಲ ಸಂಘಗಳಿಗೆ ಇನ್ನು ಮುಂದೆ ವಕೀಲರ ಉಡುಗೆಗೆ ಅವಗೌರವ ತೋರುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಡಬೇಕು. 10 ದಿನಗಳೊಳಗಾಗಿ ನೋಟಿಸ್'ಗೆ ಉತ್ತರ ನೀಡಬೇಕೆಂದು ನೋಟಿಸ್ ನಲ್ಲಿ ತಿಳಿಸಿದೆ ಎಂದು ಹೇಳಲಾಗುತ್ತಿದೆ.
Comments