ಸದ್ದಿಲ್ಲದೆ ಮದುವೆಯಾಗಿ ಬಿಟ್ರಾ ಕಾಮಿಡಿಕಿಂಗ್ ಚಿಕ್ಕಣ್ಣ..!

03 Nov 2018 2:55 PM | Entertainment
474 Report

ಸ್ಯಾಂಡಲ್ ​ವುಡ್​ನಲ್ಲಿ  ಕಾಮಿಡಿ ಕಿಂಗ್​ ಅಂದರೆ ನೆನಪಾಗೋದು ಇತ್ತಿಚಿಗೆ ಚಿಕ್ಕಣ್ಣ.. ಚಿಕ್ಕಣ್ಣ ಸಿನಿಮಾದಲ್ಲಿ ಚಿಕ್ಕಣ್ಣ ಅಂದ್ರೆ ಸಾಕು ಕಾಮಿಡಿಗೇನೂ ಕೊರತೆ ಇಲ್ಲ… ಆದರೆ ಚಿಕ್ಕಣ್ಣ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.. ಯಾಕಂದ್ರೆ ಚಿಕ್ಕಣ್ಣ ಮದುವೆಯಾಗಿದ್ದಾರಂತೆ. ಹಾಗಂತಾ ಗಾಂಧಿನಗರದಲ್ಲಿ ಗುಸು-ಪಿಸು ಹರಿದಾಡುತ್ತಿದೆ. ಹಾಸ್ಯ ನಟ  ಚಿಕ್ಕಣ್ಣ ಮದುವೆಯಾಗಿದ್ದಾರೆ. ಅದೂ ಅದೇ ರಂಗದಲ್ಲಿನ ಹಾಸ್ಯ ಕಲಾವಿದೆ ಜೊತೆ.ಅಂದಹಾಗೇ ಯಾವುದೇ ಸುದ್ದಿ ಸಮಾಚಾರವಿಲ್ಲದೇ ಸೈಲೆಂಟ್​ ಆಗಿ ಮದುವೆಯಾಗಿಬಿಟ್ರಾ..! ಅನ್ನೋದು ಚಿಕ್ಕಣ್ಣ ಅಭಿಮಾನಿಗಳ ಮಾತಾಗಿದೆ..

ಚಿಕ್ಕಣ್ಣ ಜೊತೆ ಸಪ್ತಪದಿ ತುಳಿದ ನಟಿ ಯಾರ್ ಗೊತ್ತಾ..? ಅವರೆ ನಯನಾ…ಎಸ್…ಈ ಇಬ್ಬರು ಕಲಾವಿದರು ಮದುವೆಯಾಗಿದ್ದು ನಿಜ. ಆದರೆ ರಿಯಲ್​ ಲೈಫ್​ನಲ್ಲಿ ಅಲ್ಲಾ, ರೀಲ್​ ಲೈಫ್​ನಲ್ಲಿ. ಈ ಮದುವೆ ಎಲ್ಲಾ ನಡೆದಿದ್ದೂ ಸಿನಿಮಾ ಒಂದರ ಸೆಟ್​ನಲ್ಲಿ. ಅಷ್ಟಕ್ಕೂ ಮುಖ್ಯಮಂತ್ರಿ ಪುತ್ರ ನಿಖಿಲ್​ ಕುಮಾರಸ್ವಾಮಿ ಮತ್ತು ರಚಿತಾರಾಮ್ ಬಹು ನಿರೀಕ್ಷಿತ ಸಿನಿಮಾವಾದ ಸೀತಾರಾಮ ಕಲ್ಯಾಣ ಸದ್ಯ ಸ್ಯಾಂಡಲ್ ವುಡ್’ನಲ್ಲಿ ಸಿಕ್ಕಾಪಟ್ಟೆ ಸೌಂಡು ಮಾಡುತ್ತಿದೆ. ಅದರಲ್ಲಿ ಕಾಮಿಡಿ ಸ್ಟಾರ್​ಗಳಾದ ಚಿಕ್ಕಣ್ಣ ಮತ್ತು ನಯನಾ ಅವರಿಗೆ ಮದುವೆ ಮಾಡಿಸಲಾಗಿದೆ. ಚಿಕ್ಕಣ್ಣ ಸಿನಿಮಾದಲ್ಲಿ ನಿಖಿಲ್​ ಕುಮಾರಸ್ವಾಮಿ ಸ್ನೇಹಿತನಾಗಿ ಆ್ಯಕ್ಟ್ ಮಾಡುತ್ತಿದ್ದಾರೆ. ಈಗಾಗಲೇ  89 % ಸಿನಿಮಾ ಶೂಟಿಂಗ್​ ಮುಗಿದಿದ್ದು ಇನ್ನು ಸ್ವಲ್ಪ ಕೆಲಸ ಉಳಿದಿದೆ. ಮದುವೆ ಸನ್ನಿವೇಶವನ್ನು ಚಿತ್ರತಂಡ ಅದ್ಧೂರಿಯಾಗಿ ಚಿತ್ರೀಕರಣ ಮಾಡಲಾಗಿದೆ.

Edited By

Manjula M

Reported By

Manjula M

Comments