ಹ್ಯಾಟ್ರಿಕ್ ಹೀರೋ ಶಿವಣ್ಣನ 125 ನೇ ಚಿತ್ರಕ್ಕೆ ಟೈಟಲ್ ಫಿಕ್ಸ್..!

02 Nov 2018 2:51 PM | Entertainment
605 Report

ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 125 ಚಿತ್ರದ ಟೈಟಲ್ ಇದೀಗ ಫಿಕ್ಸ್ ಆಗಿದೆ. ಶಿವಣ್ಣ ಹಾಗೂ ಶ್ರೀಮುರುಳಿ ಜೊತೆಯಾಗಿಯೇ ಮಫ್ತಿ ಸಿನಿಮಾದಲ್ಲಿ ಅಭಿನಯಿಸಿದ್ದರು. ಈ ಚಿತ್ರದಲ್ಲಿ ಶಿವಣ್ಣ ನಿರ್ವಹಿಸಿದ್ದ ಭೈರತಿ ರಣಗಲ್ ಎಂಬ ಪಾತ್ರ ಪ್ರೇಕ್ಷಕರನ್ನು ಕಾಡಿತ್ತು. ಇದೀಗ ಆ ಹೆಸರೇ  ಶಿವಣ್ಣನ 125 ನೇ ಚಿತ್ರವಾಗಿ  ಫಿಕ್ಸ್ ಆಗಿದೆ. ಆನಂದ್ ಸಿನಿಮಾದಿಂದ ಹಿಡಿದು ಇಲ್ಲಿಯವರೆಗೂ ಕೂಡ ಶಿವಣ್ಣ ತೆರೆ ಮೇಲೆ ಸಖತ್ತಾಗಿಯೇ ಮಿಂಚಿದ್ದಾರೆ. ಹಾಗಾಗಿಯೇ ಶಿವಣ್ಣ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು.

ಮಫ್ತಿ ಚಿತ್ರದಲ್ಲಿ ಲುಂಗಿಯುಟ್ಟುಕೊಂಡು ಡಿಫರೆಂಟಾಗಿ ಕಾಣಿಸಿಕೊಂಡಿರುವ ಶಿವಣ್ಣನ ಅಭಿನಯ ಎಲ್ಲರಿಗೂ ಕೂಡ  ಇಷ್ಟವಾಗಿತ್ತು. ಹಾಗಾಗಿ ಶಿವಣ್ಣನ 125 ನೇ ಚಿತ್ರಕ್ಕೆ ಭೈರತಿ ರಣಗಲ್ ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಭೈರತಿ ರಣಗಲ್ ಚಿತ್ರವನ್ನು ಮಫ್ತಿ ಚಿತ್ರ ನಿರ್ದೇಶನ ಮಾಡಿದ್ದ ನರ್ತನ್ ಅವರೇ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರವನ್ನು ಶ್ರೀ ಮುತ್ತು ಸಿನಿ ಸರ್ವಿಸಸ್ ಲಾಂಛನದಡಿ ನಿರ್ಮಾಣಗೊಳ್ಳಲಿದೆ. ಒಟ್ಟಾರೆ ಶಿವಣ್ಣ ಇದೀಗ ಬೈರತಿ ರಣಗಲ್ ಪಾತ್ರದಲ್ಲಿ ಮಿಂಚಲು ರೆಡಿಯಾಗುತ್ತಿದ್ದಾರೆ.

Edited By

Manjula M

Reported By

Manjula M

Comments