ಕಿಂಗ್ ಖಾನ್, ಮಿ. ಪರ್ಫೆಕ್ಟ್ ನ್ನ ಹಿಂದಿಕ್ಕಿದ ರಾಕಿಂಗ್ ಸ್ಟಾರ್
ಸ್ಯಾಂಡಲ್’ವುಡ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರವಾದ ಕೆಜಿಎಫ್ ಚಿತ್ರದ ಹವಾ ಹೇಗಿದೆ ಗೊತ್ತಾ..? ಕೇಳುದ್ರೆ ಬಾಯಿ ಮೇಲೆ ಬೆರಳಿಟ್ಟುಕೊಳ್ತೀರಾ..? ಸಿನಿಮಾ ರೇಟಿಂಗ್ ವೆಬ್ ಸೈಟ್ ಐಎಂಡಿಬಿಯ ಮೋಸ್ಟ್ ಆ್ಯಂಟಿಸಿಪೇಟೆಡ್ ಗ್ಲೋಬಲ್ ಮೂವಿಸ್ ಹಾಗೂ ಟಿವಿ ಟ್ರೆಂಡಿಂಗ್ ನ ಹಲವು ಭಾಷೆಗಳ ಚಿತ್ರಗಳ ಲಿಸ್ಟ್‌ನಲ್ಲಿ 3ನೇ ಸ್ಥಾನದಲ್ಲಿದೆ. ಕನ್ನಡ ಸಿನಿಮಾ ಇಂತಹ ಸ್ಥಾನ ಪಡೆದಿರುವುದು ನಿಜಕ್ಕೂ ಹೆಮ್ಮೆಯ ವಿಷಯವೇ..
ಯಶ್ ಅಭಿನಯದ ಕೆಜಿಎಫ್ ಚಿತ್ರ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಅಭಿನಯದ ಝೀರೋ ಚಿತ್ರ, ಅಮೀರ್ ಖಾನ್ ಅಭಿನಯದ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರಗಳನ್ನು ಹಿಂದಿಕ್ಕಿದ್ದು, ಲಿಸ್ಟ್’ನಲ್ಲಿ 3ನೇ ಸ್ಥಾನ ಗಿಟ್ಟಿಸಿಕೊಂಡಿದೆ. ಈ ಲಿಸ್ಟ್ ನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ರೋಬೋ 2.0 ಚಿತ್ರ ಶೇ. 53.1 ರೇಟಿಂಗ್ಸ್ ನೊಂದಿಗೆ ಮೊದಲ ಸ್ಥಾನ ಪಡೆದುಕೊಂಡಿದೆ, ವಿಜಯ್ ಅಭಿನಯದ ಸರ್ಕಾರ್ ಶೇ.27.3ರಷ್ಟು ರೇಟಿಂಗ್ಸ್ ನೊಂದಿಗೆ 2ನೇ ಸ್ಥಾನದಲ್ಲಿದೆ. ಯಶ್ ಅಭಿನಯದ ಕೆಜಿಎಫ್ ಚಿತ್ರ ಶೇ.5.7ರಷ್ಚು ರೇಟಿಂಗ್ಸ್ ನೊಂದಿಗೆ 3ನೇ ಸ್ಥಾನದಲ್ಲಿದ್ದು, ಶಾರುಖ್ ಅಭಿನಯದ ಝೀರೋ ಶೇ.4.9 ಮತ್ತು ಅಮೀರ್ ಖಾನ್ ಅಭಿನಯದ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರ ಶೇ.4.0 ರೇಟಿಂಗ್ಸ್ ನೊಂದಿಗೆ 4 ಮತ್ತು ಐದನೇ ಸ್ಥಾನಗಳನ್ನು ಪಡೆದುಕೊಂಡಿವೆ.
Comments