ಪ್ರಿಯಾಂಕ ಮದುವೆ ಗೆಸ್ಟ್ ಲಿಸ್ಟ್’ನಲ್ಲಿ ಫಸ್ಟ್ ಹೆಸರು ಯಾರದು ಗೊತ್ತಾ..?
ಪ್ರಿಯಾಂಕ ಚೋಪ್ರಾ ಅವರು ಈಗಾಗಲೇ ಮದುವೆಗೆ ಸಿದ್ದರಾಗುತ್ತಿದ್ಧಾರೆ. ಅಮೆರಿಕಾದ ನಿಕ್ ಜೋನಸ್ ಅವರ ಕೈ ಹಿಡಿಯುತ್ತಿದ್ದಾರೆ. ಪ್ರಿಯಾಂಕ-ನಿಕ್ ಮದುವೆ ನವೆಂಬರ್ 30 ರಿಂದ ಡಿಸೆಂಬರ್ 2 ರೊಳಗೆ ನಡೆಯಲಿದೆ. ಮದುವೆ ಜೋದ್ಪುರದಲ್ಲಿ ನಡೆಯಲಿದ್ದು ಎಲ್ಲ ಸಿದ್ಧತೆಯು ಜೋರಾಗಿಯೇ ನಡೆಯುತ್ತಿದೆ... ಈಗಾಗಲೇ ಶಾಪಿಂಗ್ ಸೇರಿದಂತೆ ಮದುವೆಗೆ ಕರೆಯಬೇಕಾದವರ ಗೆಸ್ಟ್ ಲಿಸ್ಟ್ ಕೂಡ ಸಿದ್ಧಪಡಿಸಲಾಗಿದೆ.
ಆಮಂತ್ರಣದ ಗೆಸ್ಟ್ ಲಿಸ್ಟ್ ನಲ್ಲಿ ಫರ್ಹಾನ್ ಅಖ್ತರ್, ಸಿದ್ಧಾರ್ಥ್ ರಾಯ್ ಕಪೂರ್, ಆಲಿಯಾ ಭಟ್, ರಣವೀರ್ ಕಪೂರ್, ಕತ್ರಿನಾ ಕಪೂರ್ ಹೆಸರಿದೆ. ಈಗಾಗಲೇ ವಿಶೇಷವಾಗಿ ಬಾಲಿವುಡ್ ದಬಾಂಗ್ ಬಾಯ್ ಸಲ್ಮಾನ್ ಖಾನ್ ಗೆ ಆಮಂತ್ರಣ ಹೋಗಿದೆ. ಪ್ರಿಯಾಂಕ ಚೋಪ್ರಾ ಮದುವೆಗೆ ಸಲ್ಮಾನ್ ಖಾನ್ ಬಂದ್ರೆ ಅದು ವಿಶೇಷ ಎನಿಸಿಕೊಳ್ಳಲಿದೆಯಂತೆ.. ಕೆಲ ದಿನಗಳ ಹಿಂದೆ ಅಷ್ಟೆ ಸಲ್ಮಾನ್ ಖಾನ್ ಹಾಗೂ ಪ್ರಿಯಾಂಕ ಚೋಪ್ರಾ ನಡುವೆ ಶೀತಲ ಸಮರ ಏರ್ಪಟ್ಟಿತ್ತು.. ಪ್ರಿಯಾಂಕ ಸಲ್ಮಾನ್ ಖಾನ್ ಅಭಿನಯದ ಭಾರತ್ ಸಿನಿಮಾವನ್ನು ಬಿಟ್ಟಿದ್ದು ಇದಕ್ಕೆ ಕಾರಣವಾಗಿತ್ತು.ಚಿತ್ರದ ಕೆಲ ದೃಶ್ಯ ಶೂಟಿಂಗ್ ಆದ್ಮೇಲೆ ಪ್ರಿಯಾಂಕ ಚಿತ್ರ ಬಿಟ್ಟಿದ್ದರು. ಇದು ಸಲ್ಮಾನ್ ಆಕ್ರೋಶಕ್ಕೆ ಕಾರಣವಾಗಿತ್ತು. ಸಲ್ಮಾನ್ ಈ ಬಗ್ಗೆ ಪ್ರತಿಕ್ರಿಯೆ ಕೂಡ ನೀಡಿದ್ದರು. ಇಬ್ಬರ ಮಧ್ಯೆ ಸಂಬಂಧ ಹಾಳಾಗಿದೆ ಎನ್ನಲಾಗ್ತಿತ್ತು. ಒಂದು ವೇಳೆ ಪಿಗ್ಗಿಯ ಆಮಂತ್ರಣ ಸ್ವೀಕರಿಸಿ ದಬಾಂಗ್ ಬಾಯ್ ಬಂದ್ರೆ ಪಿಗ್ಗಿ ಸಖತ್ ಖುಷಿಯಾಗುತ್ತಾರೆ.
Comments