ಕನ್ನಡ ರಾಜ್ಯೋತ್ಸವಕ್ಕೆ ಸ್ಯಾಂಡಲ್’ವುಡ್’ನಲ್ಲಿ ಸಿನಿಮಾಗಳ ಹಬ್ಬ..! ಇಂದು ರಿಲೀಸ್ ಆಗುವ ಸಿನಿಮಾಗಳಿವು..

ನವೆಂಬರ್ ಬಂತು ಅಂದ್ರೆ ಎಲ್ಲೆಡೆ ಕನ್ನಡ ಹಬ್ಬದ ಸಂಭ್ರಮ.. ಅದೇ ರೀತಿ ಸ್ಯಾಂಡಲ್ ವುಡ್ ನಲ್ಲೂ ಕೂಡ ಸಿನಿಮಾಗಳ ಹಬ್ಬ… ನವೆಂಬರ್ 1 ಕನ್ನಡದ ನಾಲ್ಕು ಸಿನಿಮಾಗಳು ಒಟ್ಟೊಟ್ಟಿಗೆ ತೆರೆಮೇಲೆ ಬಂದಿವೆ.. ಶರಣ್ ಅಭಿನಯದ 'ವಿಕ್ಟರಿ 2', ರಾಜ್ ಬಿ ಶೆಟ್ಟಿ ನಟನೆಯ 'ಅಮ್ಮಚ್ಚಿಯೆಂಬ ನೆನಪು', ರಾಜ್ಯೋತ್ಸದ ವಿಶೇಷ ಚಿತ್ರ 'ಕನ್ನಡ ದೇಶದೊಳ್' ಹಾಗೂ 'ಮನಸಿನ ಮರೆಯಲಿ' ಎಂಬ ಸಿನಿಮಾಗಳು ಬಿಡುಗಡೆಗೆ ಸಿದ್ದವಾಗಿವೆ. ವೀಕ್ಷಕರಿಗೆ ಕನ್ನಡ ರಾಜ್ಯೋತ್ಸವ, ದೀಪಾವಳಿ ಹಬ್ಬದ ಜೊತೆ ಜೊತೆಗೆ ಸಿನಿಮಾ ಹಬ್ಬವನ್ನು ಆಚರಿಸಬಹುದು.
ವಿಕ್ಟರಿ 2
ಶರಣ್ ಮತ್ತೆ ತೆರೆ ಮೇಲೆ ಕಾಮಿಡಿ ಮಾಡೋಕ್ಕೆ ಬರುತ್ತಿದ್ದಾರೆ. ಅವರ 'ವಿಕ್ಟರಿ 2' ಸಿನಿಮಾ ನವೆಂಬರ್ 1 ರಂದು ಬಿಡುಗಡೆಯಾಗುತ್ತಿದೆ. 'ವಿಕ್ಟರಿ' ಸಿನಿಮಾದ ಯಶಸ್ಸಿನ ನಂತರ ಮತ್ತೆ ಶರಣ್ ಅದೇ ಹೆಸರಿನ ಸಿನಿಮಾ ಮಾಡಿದ್ದಾರೆ. ಹರಿ ಸಂತೋಷ್ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಮತ್ತೊಮ್ಮೆ ವಿಕ್ಟರಿ ಬಾರಿಸುವುದರಲ್ಲಿ ನೋ ಡೌಟ್ ಎನ್ನಬಹುದೇನೋ..?
ಅಮ್ಮಚ್ಚಿಯೆಂಬ ನೆನಪು
ಈಗಾಗಲೇ ಟ್ರೇಲರ್ ಹಾಗೂ ಹಾಡುಗಳ ಮೂಲಕ 'ಅಮ್ಮಚ್ಚಿಯೆಂಬ ನೆನಪು' ವೀಕ್ಷಕರ ಗಮನ ಸೆಳೆದಿದೆ. ಸಿನಿಮಾ ವಿಶೇಷವಾಗಿದೆ ಎನ್ನುವ ಭಾವನೆಯನ್ನು ಟ್ರೇಲರ್ ಮೂಡಿಸಿದೆ. ಲೇಖಕಿ ವೈದೇಹಿ ಕಥೆಗಳನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ. ವೈಜಯಂತಿ, ರಾಜ್ ಬಿ ಶೆಟ್ಟಿ ಚಿತ್ರದಲ್ಲಿ ನಟಿಸಿದ್ದಾರೆ. ನವೀನ್ ಕುಮಾರ್ ಕ್ಯಾಮರಾ ಕೈ ಚಳಕ ಈ ಚಿತ್ರಕ್ಕಿದೆ.
ಕನ್ನಡ ದೇಶದೊಳ್
'ಕನ್ನಡ ದೇಶದೊಳ್' ಕನ್ನಡ ರಾಜ್ಯೋತ್ಸವದ ವಿಶೇಷವಾಗಿ ಸಿನಿಮಾ ಬಿಡುಗಡೆಯಾಗುತ್ತಿದೆ. ಕನ್ನಡದ ಪ್ರತಿಭೆಗಳು ಸೇರಿ ಈ ಸಿನಿಮಾವನ್ನು ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಈ ಚಿತ್ರದ ಟೈಟಲ್ ಎಲ್ಲರ ಗಮನ ಸೆಳೆದಿದೆ. ಈ ಚಿತ್ರದ ವಿಶೇಷತೆ ಎಂದರೆ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಚಿತ್ರದ ಚಿತ್ರೀಕರಣವನ್ನು ಮಾಡಲಾಗಿದೆ.
ಮನಸಿನ ಮರೆಯಲಿ
'ಮನಸಿನ ಮರೆಯಲಿ' ಎಂಬ ಸಿನಿಮಾವನ್ನು ಕೂಡ ಕನ್ನಡ ರಾಜ್ಯೋತ್ಸವಕ್ಕೆ ಬಿಡುಗಡೆ ಮಾಡಲು ನಿರ್ಧಾರ ಮಾಡಲಾಗಿದೆ. ಈ ಚಿತ್ರಕ್ಕೆ ಆಸ್ಕರ್ ಕೃಷ್ಣ ಆಕ್ಷನ್ ಕಟ್ ಹೇಳಿದ್ದಾರೆ.
Comments