ಜ್ಯೂನಿಯರ್ ದರ್ಶನ್’ಗೆ ಬರ್ತಡೇ ಸಂಭ್ರಮ: ಹ್ಯಾಪಿ ಬರ್ತಡೇ ವಿನೀಶ್

ಸ್ಯಾಂಡಲ್ ವುಡ್’ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುತ್ರ ವಿನೀಶ್ ದರ್ಶನ್ ಗೆ ಇಂದು 10ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಹಾಗಾಗಿ ವಿಜಯಲಕ್ಷ್ಮೀ ಇಂದು ತಮ್ಮ ಟ್ವಿಟ್ಟರಿನಲ್ಲಿ ಮಗನ ಫೋಟೋ ಹಾಕಿ ತಮ್ಮ ಮುದ್ದು ಮಗನ ಹುಟ್ಟು ಹಬ್ಬಕ್ಕೆ ದ ಶುಭಾಶಯ ತಿಳಿಸಿದ್ದಾರೆ. ವಿಜಯಲಕ್ಷ್ಮೀ ವಿನೀಶ್ ಫೋಟೋವನ್ನು ಟ್ವಿಟ್ಟರಿನಲ್ಲಿ ಹಾಕಿ ಅದಕ್ಕೆ, “ನನ್ನ ಚಿಕ್ಕ ಹುಡುಗನಿಗೆ ಈಗ 10 ವರ್ಷ” ಎಂದು ಹೇಳುತ್ತಾ ಬರ್ತ್ ಡೇ ಬಾಯ್ ಎಂಬ ಹ್ಯಾಶ್‍ಟ್ಯಾಗ್ ಬಳಸಿ ಶುಭಾಷಯ ತಿಳಿಸಿದ್ದಾರೆ.
ದರ್ಶನ್ ಅಭಿಮಾನಿಗಳು ವಿನೀಶ್ ಹುಟ್ಟುಹಬ್ಬಕ್ಕೆ ಶುಭಾಶಯವನ್ನು ತಿಳಿಸುತ್ತಿದ್ದಾರೆ. ದರ್ಶನ್ ಫ್ಯಾನ್ಸ್ ಕ್ಲಬ್ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಹಾಗೂ ವಿನೀಶ್ ಫೋಟೋ ಹಾಕಿ ಶುಭಾಶಯ ಕೋರುತ್ತಿದ್ದಾರೆ. ದರ್ಶನ್ ಅವರಿಗೆ ಪ್ರಾಣಿಗಳೆಂದರೆ ತುಂಬಾ ಪ್ರೀತಿ.. ವಿನೀಶ್ ಕೂಡ ತನ್ನ ತಂದೆಯ ಹಾದಿಯಲ್ಲೇ ಸಾಗುತ್ತಿದ್ದಾನೆ.. ದರ್ಶನ್ ಹಾಗೂ ವಿನೀಶ್ ‘ಐರಾವತ’ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈಗ ‘ಯಜಮಾನ’ ಚಿತ್ರದ ಒಂದು ಹಾಡಿನಲ್ಲಿ ವಿನೀಶ್ ತಮ್ಮ ತಂದೆ ಜೊತೆ ಹೆಜ್ಜೆ ಹಾಕಿ ಮತ್ತೆ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಒನ್ಸ್ ಎಗೈನ್ ಹ್ಯಾಪಿ ಬರ್ತಡೇ ವಿನೀಶ್..
My lit boy turns 10
Comments