ಬಿಗ್ ಬಾಸ್ ಮನೆಯಲ್ಲಿ ಶುರುವಾಯ್ತು ಲವ್ ಕಹಾನಿ..! ಯಾರಿಗೆ ಯಾರ ಜೊತೆ ಲವ್ವಿ ಡವ್ವಿ..!?
ಸಾಮಾನ್ಯವಾಗಿ ಬಿಗ್ ಬಾಸ್ ಮನೆಯಲ್ಲಿ ಲವ್ ಸ್ಟೋರಿಗಳು ನಡೆದಿರೋದು ಎಲ್ಲರಿಗೂ ಕೂಡ ತಿಳಿದೆ ಇದೆ. ಒಬ್ಬರ ಹೆಸರ ಜೊತೆ ಮತ್ತೊಬ್ಬರ ಹೆಸರನ್ನು ಸೇರಿಸಿ ಅದಕ್ಕೊಂದು ಲವ್ ಟ್ಯಾಗ್ ಕಟ್ಟಿಬಿಡುತ್ತಾರೆ. ಅದೇ ರೀತಿ ಈ ಸೀಸನ್ ನಲ್ಲೂ ಇಂಟರೆಸ್ಟಿಂಗ್ ಸ್ಟೋರಿ ಶುರುವಾಗಿದೆ. ಆದರೆ ಇದು ಲವ್ ಅಲ್ವಂತೆ ಪ್ರೆಂಡ್ ಶಿಪ್ ಲವ್ವಂತೆ..! ಬಿಗ್ ಬಾಸ್ ಮನೆಯಲ್ಲಿ ನಿನ್ನೆ ನಡೆದ ಫಸ್ಟ್ ಲವ್ ಟಾಸ್ಕ್ ನಲ್ಲಿ ಸೋನು ಪಾಟೀಲ್ ನವೀನ್‌ಗೆ ಹಾರ್ಟ್ ಬಲೂನ್ ಕೊಟ್ಟು ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾಳೆ.
ಟಾಸ್ಕ್‌ನಲ್ಲಿ ಮೊದಲಿಗೆ ತನ್ನ ಅಜ್ಜಿಯ ಬಗ್ಗೆ ಮಾತನಾಡಿದ ಸೋನು ಪಾಟೀಲ್ ನಂತರ ನವೀನ್ ನನ್ನ ಲವರ್ ಅಂತಲ್ಲ. ಬೆಸ್ಟ್ ಫ್ರೆಂಡ್ ಅಂತಾ ಇಷ್ಟಪಡ್ತೀನಿ. ಇಲ್ಲಿಯವರೆಗೆ ನಾನು ಯಾವುದೇ ಹುಡುಗನನ್ನ ಇಷ್ಟಪಟ್ಟಿಲ್ಲ. ನವೀನ್‌ನ ಇಷ್ಟಪಡ್ತೀನಿ ಅಂತಾ ಹೇಳಿರೋದು ಬಿಗ್ ಬಾಸ್ ಸ್ಪರ್ಧಿಗಳಿಗೆ ಕ್ಯೂರಾಸಿಟಿಯನ್ನು ಕ್ರಿಯೆಟ್ ಮಾಡಿದೆ. ಕಷ್ಟ ಎಂದಾಗ ನನಗೆ ಯಾರೂ ಹೆಲ್ಪ್ ಮಾಡಿಲ್ಲ. ಪ್ರೀತಿ ಅಂದ್ಮೇಲೆ ಎಲ್ಲರೂ ಚೀಪ್ ಆಗಿ ನೋಡ್ತಾರೆ. ಆದ್ರೆ, ನವೀನ್ ಹೆಣ್ಣು ಮಕ್ಕಳಿಗೆ ತುಂಬಾ ಗೌರವ ಕೊಡ್ತಾನೆ. ನನಗೆ ಚಳಿಯಾಗುತ್ತಿದ್ದಾಗ ನನಗೆ ಬಂದು ಜಾಕೆಟ್ ಕೊಟ್ಟ. ಆಗ ನಾನು ಯಾರು ಅಂತಾ ಅವನಿಗೆ ಗೊತ್ತಿಲ್ಲ. ಜಸ್ಟ್ ಹೆಲ್ಪ್ ಮಾಡಿದ. ಒಬ್ಬ ಫ್ರೆಂಡ್ ಆಗಿ ನವೀನ್ ಐ ಲವ್ ಯೂ. ನವೀನ್ ನನ್ ಬಗ್ಗೆ ಏನಾದ್ರೂ ಅಂದುಕೊಳ್ಳಿ. ಬಟ್ ಅವನು ನನಗೆ ಫ್ರೆಂಡ್ ಅಷ್ಟೇ’ ಎಂದರು.
Comments