#mee too ಅಭಿಯಾನ ಹಿನ್ನಲೆ: ಅರ್ಜನ್ ಸರ್ಜಾ ವಿರುದ್ಧ ದೂರು ನೀಡಲು ಮುಂದಾದ ಶೃತಿ ಹರಿಹರನ್..!?

ಸದ್ಯ ಸ್ಯಾಂಡಲ್ ವುಡ್’ನಲ್ಲಿ ಮೀಟೂ ಅಭಿಯಾನ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.. ಮೀಟೂ ಚಳವಳಿಯಲ್ಲಿ ನಟಿ ಶ್ರುತಿ ಹರಿಹರನ್ ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳ ಆರೋಪಕ್ಕೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.. ನಟಿ ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ಮೇಲೆ ಸೇಡು ತೀರಿಸಿಕೊಳ್ಳಲು ಹೀಗೆಲ್ಲಾ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದು ಬೇರೆ ಎಲ್ಲಿಂದಲ್ಲೋ ಅಲ್ಲ.. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದಲೇ..! ಈಗಾಗಲೇ ಚಂದನವನದಲ್ಲಿ ಸಾಕಷ್ಟು ಹೆಸರು ಮಾಡಿರುವ ಧ್ರುವ ಸರ್ಜಾ ಜೊತೆ ಸಿನಿಮಾದಲ್ಲಿ ನಟಿಸುವ ಬಯಕೆ ಶೃತಿ ಹರಿಹರನ್’ಗೆ ಇತ್ತಂತೆ…ಅದಕ್ಕೆ ಅರ್ಜುನ್ ಸರ್ಜಾ ಅವಕಾಶ ಕೊಡಲಿಲ್ಲ.
ಇದೀಗ ಮೀ ಟೂ ಅಭಿಯಾನದಲ್ಲಿ ಬಹುಭಾಷಾ ತಾರೆ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮಾಡಿದ್ದ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಂಧಾನ ಸಭೆ ವಿಫಲವಾಗಿದ್ದು, ಈ ನಡುವೆ ಇಬ್ಬರು ಕೂಡ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ನಡುವೆಶೃತಿ ಹರಿಹರನ್ ಅವರು ಅರ್ಜನ್ ಸರ್ಜಾ ವಿರುದ್ಧ 11:30ಕ್ಕೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಿದ್ದಾರೆ ಎನ್ನಲಾಗಿದೆ. ವಿಸ್ಮಯ ಚಿತ್ರೀಕರಣ ನಡೆಸಿದ ಜಾಗ, ಅಂದರೆ ಚೆನ್ನೈ ಅಥವಾ ಹೈದರಾಬಾದ್‌ನಲ್ಲಿ ಕೇಸ್ ದಾಖಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ನಂತರದ ದಿನಗಳಲ್ಲಿ ಇದು ಯಾವ ರೀತಿ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
Comments