ಅಮ್ಮನ ಜೊತೆ ಇರುವ ಸೆಲ್ಫಿ ಕಳಿಸಿ, 50 ಸಾವಿರದ ಗಿಫ್ಟ್ ನಿಮ್ಮದಾಗಿಸಿಕೊಳ್ಳಿ..! ಹೇಗೆ ಅಂತೀರಾ..?

ನಟ ಅಜಯ್ ರಾವ್ ಅಭಿನಯದ 'ತಾಯಿಗೆ ತಕ್ಕ ಮಗ' ಸಿನಿಮಾ ಈಗಾಗಲೇ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರತಂಡ ಈಗ ವಿಭಿನ್ನ ರೀತಿಯಲ್ಲಿ ತಮ್ಮ ಸಿನಿಮಾವನ್ನು ಜನರಿಗೆ ತಲುಪಿಸಲು ಪ್ರಯತ್ನ ಪಡುತ್ತಿದೆ. ಅಮ್ಮ ಎಂದರೆ ಎಲ್ಲರಿಗೂ ಕೂಡ ಪ್ರೀತಿ, ತಾಯಿಯೆ ಮೊದಲ ಗುರು ಅಂತಾರೆ.. ಯಾರಿಗೂ ಕೊಡದ ಸ್ಥಾನವನ್ನು ತಾಯಿಗೆ ಕೊಡ್ತಾರೆ.. ತನ್ನ ನೋವುಗಳನ್ನು ತಾಯಿ ನುಂಗುತ್ತ ಮಕ್ಕಳನ್ನು ಖುಷಿಯಾಗಿರಿಸಿಕೊಂಡಿರುತ್ತಾಳೆ. ಅದೇ ತಾಯಿಯ ಮಮಕಾರ ಪ್ರೀತಿ,ವಾತ್ಸಲ್ಯ ಅನ್ನೋದು.
ತಾಯಿಗೆ ತಕ್ಕ ಮಗ ಸಿನಿಮಾದ ಮೂಲಕ ನೀವು ನಿಮ್ಮ ತಾಯಿಗೆ ಬಂಪರ್ ಗಿಫ್ಟ್ ಕೊಡಬಹುದು..ನೀವು ನಿಮ್ಮ ತಾಯಿಯ ಜೊತೆಗೆ ತೆಗೆದುಕೊಂಡ ಸೆಲ್ಫಿಯನ್ನು ಚಿತ್ರತಂಡಕ್ಕೆ ಕಳುಹಿಸಬಹುದಾಗಿದೆ. ಇದರಲ್ಲಿ ನಾಲ್ಕು ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಿದ್ದು, ಮೊದಲ ಬಹುಮಾನ 50000, ಎರಡನೇ ಬಹುಮಾನ 25000 ಮೂರನೇ ಬಹುಮಾನ 15000 ಹಾಗೂ ನಾಲ್ಕನೇ ಬಹುಮಾನ 10000 ಎಂದು ನಿಗದಿ ಮಾಡಲಾಗಿದೆ.ಈ ಸ್ಪರ್ಧೆಯಲ್ಲಿ ಭಾಗವಹಿಸುವ ಆಸೆ ಇದ್ದವರು ನಿಮ್ಮ ಅಮ್ಮನ ಜೊತೆ ಸೆಲ್ಫಿ ತೆಗೆದು 7338259619 ಗೆ ವಾಟ್ಸಾಪ್ ಮಾಡಬಹುದಾಗಿದೆ. ನವೆಂಬರ್ 2 ಈ ಸ್ಪರ್ಧೆಯ ಕೊನೆಯ ದಿನವಾಗಿದೆ. 'ತಾಯಿಗೆ ತಕ್ಕ ಮಗ' ಸಿನಿಮಾ ನವೆಂಬರ್ 16 ಕ್ಕೆ ಬಿಡುಗಡೆಯಾಗಲಿದೆ.
ಸೆಲ್ಫಿ ಕಾಂಟೆಸ್ಟ್!
— Shashank (@Shashank_Dir) October 26, 2018
ಅಮ್ಮನಿಗೆ ಕೊಡಿ, 50,000/- ಗಿಫ್ಟ್!
ನಿಮ್ಮ ಅಮ್ಮನ ಜೊತೆ ಸೆಲ್ಫಿ ತೆಗೆದು 7338259619 ಗೆ ವಾಟ್ಸಾಪ್ ಮಾಡಿ, 50,000/- ಗೆಲ್ಲಿ!
ಮೊದಲನೆಯ ಬಹುಮಾನ: 50,000/-
ಎರಡನೆಯ ಬಹುಮಾನ: 25,000/-
ಮೂರನೇ ಬಹುಮಾನ: 15,000/-
ನಾಲ್ಕನೇ ಬಹುಮಾನ: 10,000/-
ಪ್ರವೇಶಕ್ಕೆ ಕೊನೆಯ ದಿನ:
ನವೆಂಬರ್ 2. @AjaiRao@sumalathaA pic.twitter.com/NWu3EafB2Y
Comments