ಕನ್ನಡದ ನಿರ್ದೇಶಕನಿಗೆ ಫಿದಾ ಆದ್ರಾ ನಟಿ ಸಮಂತಾ..!?

ಸ್ಯಾಂಡಲ್ ವುಡ್’ನಲ್ಲಿ ವಿಭಿನ್ನ ಕಥಾ ಹಂದರವನ್ನು ಹೊಂದಿರುವ ಸಾಕಷ್ಟು ಸಿನಿಮಾಗಳು ಬಂದಿವೆ. ಅದೇ ರೀತಿಯಾಗಿ ಯಶಸ್ಸನ್ನು ಕೂಡ ಕಂಡಿವೆ. ನೋಡುಗರಿಗೆ ವಿಭಿನ್ನ ಕಥಾಹಂದರ ಇರುವ ಸಿನಿಮಾ ಆದರೆ ಜನ ನೋಡ್ತಾರೆ. ಆ ನಿಟ್ಟಿನಲ್ಲಿ ನೋಡುವುದಾದರೆ ಸ್ಯಾಂಡಲ್ ವುಡ್ ನಲ್ಲಿ ಅನೇಕ ಸಿನಿಮಾಗಳು ಇದೆ ಸಾಲಿಗೆ ಸೇರುತ್ತವೆ.ಅದರಲ್ಲಿ ಯೂ ಟರ್ನ್ ಕೂಡ ಒಂದು.. ಕನ್ನಡದ ನೇಟಿವಿಟಿಗೆ ತಕ್ಕಂತೆ ಯೂಟರ್ನ್ ಸಿನಿಮಾವನ್ನು ನಿರ್ದೇಶಕ ಪವನ್ ಕುಮಾರ್ ಅಚ್ಚುಕಟ್ಟಾಗಿ ನಿರ್ದೇಶನ ಮಾಡಿದ್ದಾರೆ.
ಕನ್ನಡದಲ್ಲಿ ಯಶಸ್ಸನ್ನು ದಾಖಲಿಸಿದ ಸಿನಿಮಾ 'ಯೂ ಟರ್ಟ್'. ಕನ್ನಡದ ನೇಟಿವಿಗೆ ತಕ್ಕಂತೆ ಮಾಡಿದ್ದ ಒಂದು ಪ್ರಯೋಗಾತ್ಮಕ ಸಿನಿಮಾ ಇದಾಗಿದೆ. ಆದರೆ, ಕಮರ್ಷಿಯಲ್ ಸಿನಿಮಾಗಳನ್ನೇ ಹೆಚ್ಚಾಗಿ ಮಾಡಿಕೊಂಡು ಬಂದಿದ್ದ ನಟಿ ಸಮಂತಾ, ಈ ಚಿತ್ರವನ್ನು ನೋಡಿದ, ಮೇಲೆ 'ಮಾಡಿದರೆ ಇಂಥ ಸಿನಿಮಾ ಮಾಡಬೇಕು' ಎಂದು ಹೇಳಿ 'ಯೂ ಟರ್ನ್' ತೆಲುಗಿಗೆ ರೀಮೇಕ್ ಮಾಡಿದ್ದು ಮಾತ್ರವಲ್ಲ ತಾನೇ ನಟಿಸಿ, ನಿರ್ಮಾಣ ಮಾಡುತ್ತೇನೆ ಎಂದಿದ್ದಾರೆ. ರೀಮೇಕ್ ಅವತರಣಿಕೆಯನ್ನೂ ಕೂಡ ಮೂಲ ಚಿತ್ರದ ನಿರ್ದೇಶಕ ಪವನ್ ಕುಮಾರ್ ಅವರಿಂದಲೇ ನಿರ್ದೇಶನ ಮಾಡಿಸುತ್ತೇನೆ ಎಂದಿದ್ದಾರೆ..
Comments