2017 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಯ ಸಂಪೂರ್ಣ ಪಟ್ಟಿ..! ಯಾವ ಚಿತ್ರಕ್ಕೆ ಮೊದಲ ಸ್ಥಾನ..?
2017 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಈಗಾಗಲೇ ಪ್ರಕಟವಾಗಿದ್ದು, 'ಶುದ್ದಿ' ಚಿತ್ರವು ಅತ್ಯುತ್ತಮ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 'ಮಾರ್ಚ್ 22' ಕ್ಕೆ ದ್ವಿತೀಯ ಸ್ಥಾನ ಲಭಿಸಿದ್ದರೆ 3ನೇ ಅತ್ಯುತ್ತಮ ಚಿತ್ರವಾಗಿ 'ಪಡ್ಡಾಯಿ' ಆಯ್ಕೆಯಾಗಿದೆ. ಇನ್ನೂ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಸಿನಿಮಾ ಅತ್ಯುತ್ತಮ ಮನರಂಜನಾ ಚಿತ್ರ ಎಂಬ ಪ್ರಶಸ್ತಿಗೆ ಭಾಜನವಾಗಿದೆ. ಅತ್ಯುತ್ತಮ ನಟನಾಗಿ ವಿಶೃತ್ ನಾಯ್ಕ, ಅತ್ಯುತ್ತಮ ನಟಿಯಾಗಿ ತಾರಾ ಅನುರಾಧ ಆಯ್ಕೆಯಾಗಿದ್ದಾರೆ. 2017ರ ರಾಜ್ಯ ಚಲನಚಿತ್ರ ಪ್ರಶಸ್ತಿಯ ಪಟ್ಟಿ ಈ ಕೆಳಕಂಡಂತಿದೆ.
ಅತ್ಯುತ್ತಮ ನಟ - ವಿಶೃತ್ ನಾಯ್ಕ
ಅತ್ಯುತ್ತಮ ನಟಿ - ತಾರಾ ಅನುರಾಧಾ (ಹೆಬ್ಬೆಟ್ ರಾಮಕ್ಕ)
ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ - ಹೆಬ್ಬೆಟ್ಟು ರಾಮಕ್ಕ
ಅತ್ಯುತ್ತಮ ಮನರಂಜನಾ ಚಿತ್ರ - ರಾಜಕುಮಾರ
ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ - ಅಯನ
ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ - ಸೋಫಿಯಾ(ಕೊಂಕಣಿ)
ಅತ್ಯುತ್ತಮ ಮಕ್ಕಳ ಚಿತ್ರ - ಎಳೆಯರು ನಾವು ಗೆಳೆಯರು
ಅತ್ಯುತ್ತಮ ಪೋಷಕ ನಟ - ಮಂಜುನಾಥ ಹೆಗಡೆ (ಲಕ್ಷ್ಮೀನಾರಾಯಣರ ಪ್ರಪಂಚಾನೇ ಬೇರೆ)
ಅತ್ಯುತ್ತಮ ಪೋಷಕ ನಟಿ - ರೇಖಾ (ಮೂಕ ನಾಯಕ)
ಅತ್ಯುತ್ತಮ ಚಿತ್ರಕಥೆ - ವೆಂಕಟ್ ಭಾರದ್ವಾಜ್ (ಕೆಂಪಿರ್ವೆ)
ಅತ್ಯುತ್ತಮ ಸಂಭಾಷಣೆ - ಎಸ್.ಜಿ.ಸಿದ್ದರಾಮಯ್ಯ(ಹೆಬ್ಬೆಟ್ಟು ರಾಮಕ್ಕ)
ಅತ್ಯುತ್ತಮ ಛಾಯಾಗ್ರಹಣ - ಸಂತೋಶ್ ರೈ ಪತಾಜೆ, (ಚಮಕ್)
ಅತ್ಯುತ್ತಮ ಸಂಗೀತ ನಿರ್ದೇಶನ - ವಿ.ಹರಿಕೃಷ್ಣ (ರಾಜಕುಮಾರ)
ಅತ್ಯುತ್ತಮ ಸಂಕಲನ - ಹರೀಶ್ ಕೊಮ್ಮ (ಮಫ್ತಿ)
ಅತ್ಯುತ್ತಮ ಬಾಲನಟ - ಮಾಸ್ಟರ್ ಕಾರ್ತಿಕ್
ಅತ್ಯುತ್ತಮ ಬಾಲನಟಿ - ಶ್ಲಘ ಸಾಲಿಗ್ರಾಮ (ಕಟಕ)
ಕನ್ನಡಭಾಷೆಗೆ ಹೆಚ್ಚು ಪ್ರಶಸ್ತಿ ಬಂದಿರುವುದು ಖುಷಿಯ ವಿಚಾರವೇ ಸರಿ..
Comments