ಅರ್ಜುನ್ ಸರ್ಜಾರಿಂದ ಶೃತಿ ಹರಿಹರನ್ ವಿರುದ್ದ ಮಾನನಷ್ಟ ಮೊಕದ್ದಮೆ..! ಪರಿಹಾರ ಎಷ್ಟು ಕೋಟಿ ಗೊತ್ತಾ..?

ಮೀಟೂ ಆರೋಪದಲ್ಲಿ ಸಿಲುಕಿರುವ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮಾಡಿರುವ ಮೀ ಟೂ ಆರೋಪಕ್ಕೆ ಸಂಬಂಧ ಪಟ್ಟಂತೆ, ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಶೃತಿ ಹರಿಹರನ್ ವಿರುದ್ಧ 5 ಕೋಟಿ ಪರಿಹಾರ ಕೋರಿ ನಟ ಅರ್ಜುನ್ ಸರ್ಜಾ ಪರವಾಗಿ ಸೋದರಳಿಯ ಧ್ರುವ ಸರ್ಜಾ ಅವರು ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಕೆಲ ದಿನಗಳಿಂದ ಶೃತಿ ಹಾಗೂ ಅರ್ಜುನ್ ಸರ್ಜಾ ವಿರುದ್ದ ಈ ಮೀಟೂ ಗಲಾಟೆ ಕೇಳಿ ಬರುತ್ತಿದೆ.
ಇನ್ನು ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿದ್ದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ದಿನದಿಂದ ದಿನಕ್ಕೆ ಕುತೂಹಲಕಾರಿ ಎನಿಸುತ್ತಿದೆ ಅಷ್ಟೆ ಅಲ್ಲದೆ ಇದಕ್ಕೆಲ್ಲಾ ಪುಷ್ಟಿ ನೀಡುವಂತೆ, ಸದ್ಯ ಅರ್ಜುನ್ ಸರ್ಜಾ ಅವರ ಇ-ಮೇಲ್, ಟ್ವಿಟರ್ ಖಾತೆಗಳು ಹ್ಯಾಕ್ ಆಗಿವೆ ಎಂದು ಹೇಳಲಾಗುತ್ತಿದೆ. ಸಿನಿಮಾ ರಂಗಕ್ಕೆ ಮೀಟೂ ಕಾಲಿಟ್ಟಿದೆ ತಡ ನಟಿಯರು ತಮ್ಮ ಪ್ರಚಾರಕ್ಕೋ ಮತ್ಯಾವುದಕ್ಕೋ ಈ ಮೀಟೂ ಅಭಿಯಾನವನ್ನು ಬಳಸಿಕೊಳ್ಳುತ್ತಿದ್ದಾರೆ. ಇದಕ್ಕೆಲ್ಲಾ ಯಾವಾಗ ತೆರೆ ಬೀಳುತ್ತದೆ ಎನ್ನುವುದನ್ನು ಕಾದು ನೋಡ ಬೇಕಿದೆ.
Comments