ರುಸ್ತುಂ ಚಿತ್ರದಲ್ಲಿ ಶಿವರಾಜ್ ಕುಮಾರ್ ಲುಕ್ ರಿವೀಲ್..! ಹೇಗಿದ್ದಾರೆ ಶಿವಣ್ಣ..?

ಕರುನಾಡ ಚಕ್ರವರ್ತಿ ನಟ ಶಿವರಾಜ್ ಕುಮಾರ್ ಅಭಿನಯದ ಸಿನಿಮಾಗಳು ಬಾಕ್ಸ್ ಆಫೀಸ್ ನ ಕೊಳ್ಳೆ ಹೊಡೆಯುವುದಂತೂ ಸುಳ್ಳಲ್ಲ.. ಬಂಡವಾಳ ಹಾಕಿದವರಿಗೆ ಮೋಸ ಅಂತೂ ಆಗಲ್ಲ.. ಅಂದಿನಿಂದ ಇಂದಿನವರೆಗೂ ಕೂಡ ಯಂಗ್ ಅಂಡ್ ಎನರ್ಜಿಟಿಕ್ ಆಗಿರುವ ನಟ ಶಿವರಾಜ್ ಕುಮಾರ್ ಅವರು ವಿ ವರ್ಮಾ ನಿರ್ದೇಶನದ ರುಸ್ತುಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶಿವರಾಜ್‌ಕುಮಾರ್ ಅಭಿನಯದ ರುಸ್ತುಂ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ರುಸ್ತುಂ ಚಿತ್ರದಲ್ಲಿ ಶಿವರಾಜ್‌ಕುಮಾರ್ ಅಭಿನಯಿಸುತ್ತಿದ್ದಾರೆ. ಇನ್ನು ವೈರಲ್ ಆಗಿರುವ ಫೋಟೋದಲ್ಲಿ ಶಿವರಾಜ್‌ಕುಮಾರ್ ಗನ್ ಹಿಡಿದು ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ... ಈ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಮೀಸೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರುಸ್ತುಂನಲ್ಲಿ ದಕ್ಷಿಣ ಭಾರತದ ಖ್ಯಾತ ವಿಲನ್‌ಗಳು ನಟಿಸುತ್ತಿರುವುದು ವಿಶೇಷವಾಗಿದೆ. ಶ್ರದ್ಧಾ ಶ್ರೀನಾಥ್, ರಚಿತಾ ರಾಮ್, ವಿವೇಕ್ ಓಬೆರಾಯ್ ಸೇರಿದಂತೆ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ. ಈ ಚಿತ್ರ ತೆರೆಕಾಣಲು ಇನ್ನೂ ಸಾಕಷ್ಟು ಸಮಯ ಬೇಕು..ಏನೆ ಆಗಲಿ ಶಿವಣ್ಣನ ಸಿನಿಮಾಗೆ ಹೋದ್ರೆ ಕೊಟ್ಟ ಕಾಸಿಗೆ ಮೋಸ ಇಲ್ಲ ಅನ್ನೋದು ಸಿನಿ ರಸಿಕರ ಮಾತು.
Comments