ಮೀಟೂ ಅಭಿಯಾನ ಹಿನ್ನಲೆ: ಅರ್ಜುನ್ ಸರ್ಜಾ ಪರ ಬಿ.ಸರೋಜಾದೇವಿ ಬ್ಯಾಟಿಂಗ್..!
ಎಲ್ಲರಿಗೂ ತಿಳಿದೆ ಇರುವ ಹಾಗೆ ಸ್ಯಾಂಡಲ್ ವುಡ್ ನಲ್ಲಿ ಮೀಟೂ ಅಭಿಯಾನ ಬಿರುಗಾಳಿಯಂತೆ ಒಬ್ಬರಾದ ಮೇಲೆ ಮತ್ತೊಬ್ಬರ ಮೇಲೆ ಬರುತ್ತಿದೆ. ಮೀಟೂ ಚಳವಳಿಯಲ್ಲಿ ನಟಿ ಶ್ರುತಿ ಹರಿಹರನ್ ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳ ಆರೋಪ ಈಗ ಭಾರಿ ಚರ್ಚೆಗೆ ಕಾರಣವಾಗಿದೆ. ಕೆಲವು ನಟಿಯರು ಶೃತಿ ಪರ ನಿಂತರೆ ಮತ್ತೆ ಕೆಲವರು ಆಕೆಯ ವಿರುದ್ದ ಕಿಡಿ ಕಾರುತ್ತಿದ್ದಾರೆ. ಆಕೆಯ ಜೊತೆ ನಟ ಚೇತನ್ ಕೂಡ ಸೇರಿಕೊಂಡು ಅರ್ಜುನ್ ಸರ್ಜಾ ವಿರುದ್ದ ಧ್ವನಿ ಎತ್ತಿದ್ದಾರೆ.
ಆದರೆ ಇದೀಗ ಕನ್ನಡದ ಹಿರಿಯ ನಟಿ ಬಿ ಸರೋಜಾದೇವಿ ಕೂಡ ಅರ್ಜುನ್ ಸರ್ಜಾರವರ ಬೆಂಬಲಕ್ಕೆ ನಿಂತಿದ್ದಾರೆ. ಸರ್ಜಾ ಫ್ಯಾಮಿಲಿ ಕೆಟ್ಟ ಫ್ಯಾಮಿಲಿ ಅಲ್ಲ. ಅರ್ಜುನ್ ಸರ್ಜಾ ಆ ರೀತಿಯವರು ಅಲ್ಲಾ, ಅವರು ಹೆಣ್ಣು ಮಕ್ಕಳಿಗೆ ಗೌರವ ನೀಡುತ್ತಾರೆ. ಈ ವಿಷಯವನ್ನು ನಾನು ನಂಬುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ನಾವು ತುಂಬಾ ವರ್ಷಗಳಿಂದ ಅವರನ್ನು ನೋಡುತ್ತಿದ್ದೇವೆ.. ಅವರು ಎಲ್ಲರನ್ನೂ ಗೌರವದಿಂದ ನೋಡುತ್ತಾರೆ. ಅಷ್ಟೆ ಅಲ್ಲ…ಶ್ರುತಿ ಹರಿಹರನ್ ಯಾರು ಅಂತಾನೇ ನನಗೆ ಗೊತ್ತಿಲ್ಲ. ಅರ್ಜುನ್ ಸರ್ಜಾ ವಿರುದ್ಧ ಈ ರೀತಿ ಆರೋಪ ಮಾಡುವುದು ಸರಿಯಲ್ಲ ಎಂದು ಬಿ ಸರೋಜಾದೇವಿ ಹೇಳಿದ್ದಾರೆ. ಇನ್ನೂ ಸಾಕಷ್ಟು ಕಲಾವಿದರು ಅರ್ಜುನ್ ಸರ್ಜಾ ಪರ ಬ್ಯಾಟಿಂಗ್ ಬೀಸಿದ್ದಾರೆ.
Comments