ಡಾಲಿ ಧನಂಜಯ್ ಅಭಿನಯದ ಭೈರವ ಗೀತಾ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್..!
ಸ್ಯಾಂಡಲ್ವುಡ್’ನಲ್ಲಿ ಟಗರು ಸಿನಿಮಾ ಬಂದ ಮೇಲೆ ಧನಂಜಯ್ ಆಗಿದ್ದ ಈ ನಟ ಡಾಲಿ ಧನಂಜಯ್ ಅಂತಾನೇ ಫೇಮಸ್ ಆಗಿಬಿಟ್ಟರು.. ಆ ಸಿನಿಮಾದ ನಂತರ ಧನಂಜಯ್ ಗೆ ಒಳ್ಲೇ ನೇಮು ಫೇಮು ಎಲ್ಲವೂ ಕೂಡ ಸಿಕ್ಕಿತ್ತು.. ಇದೀಗ ಸ್ಯಾಂಡಲ್‌ವುಡ್‌ನ ಡಾಲಿ ಧನಂಜಯ್‌ನ ಭೈರವನ ಅವತಾರವನ್ನು ನೋಡಿ ಅಭಿಮಾನಿಗಳು ಬೆಕ್ಕರ ಬೆರಗಿದ್ದಾರೆ..ನಿನ್ನೆ ಮೊನ್ನೆವರೆಗೂ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ಭೈರವ ಇದ್ದಕ್ಕಿದ್ದ ಹಾಗೆ ಈಗ ದಿಢೀರನೇ ಹಾಟ್ ಭೈರವನಾಗಿ ಎಂಟ್ರಿ ಕೊಟ್ಟಿದ್ದು ಅಭಿಮಾನಿಗಳು ಬೆರಗಾಗಿದ್ದಾರೆ.ಇತ್ತಿಚಿಗಷ್ಟೆ ಬೈರವ ಗೀತಾ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದ್ದವು. ಅದಕ್ಕೆ ಸಖತ್ ರೆಸ್ಪಾನ್ಸ್ ಕೂಡ ಸಿಕ್ಕಿತ್ತು.
ಡಾಲಿ ಧನಂಜಯ್ ಇದೀಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಧನಂಜಯ್ ಅಭಿನಯನದ ಬಹುನಿರೀಕ್ಷಿತ ಭೈರವಾ ಗೀತಾ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಎಸ್.. ರಾಮಗೋಪಾಲ್ ವರ್ಮಾ ನಿರ್ದೇಶನದಲ್ಲಿ ಡಾಲಿ ಧನಂಜಯ್ ಹಾಗೂ ಇರಾ ನಟಿಸಿರುವ ಭೈರವಾ ಗೀತಾ ಚಿತ್ರ ನವೆಂಬರ್ 22 ರಂದು ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ಈ ವಿಚಾರವಾಗಿ ಧನಂಜಯ್ ಹಾಗೂ ರಾಮ್ ಗೋಪಾಲ್ ವರ್ಮಾ ಟ್ವಿಟ್ ಕೂಡ ಮಾಡಿದ್ದಾರೆ. ಬಾಲಿವುಡ್ ನಿರ್ದೇಶಕ ಮತ್ತು ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಇಬ್ಬರು ಸೇರಿ ನಿರ್ಮಿಸಿರುವ ಭೈರವ ಗೀತಾ ಸಿನಿಮಾ ತೆಲುಗು, ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗುತ್ತಿವೆ. ಭೈರವಾ ಗೀತಾ ಸಿನಿಮಾವು ತೆರೆಮೇಲೆ ಬಂದು ಸಿನಿ ರಸಿಕರನ್ನು ಯಾವ ರೀತಿ ಮೋಡಿ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
Comments