‘# Mee too’ ಕುರಿತು ಹರ್ಷಿಕಾ ಪೂಣಚ್ಚ ಸಿಡಿಸಿದ್ರು ಹೊಸ ಬಾಂಬ್..!
ಚಂದನವನದಲ್ಲಿ ಭಾರೀ ಸಂಚಲನವನ್ನು ಮೂಡಿಸಿರುವ 'ಮೀ ಟೂ' ಅಭಿಯಾನದ ಕುರಿತು ಕೆಲ ಮಹಿಳೆಯರು ಈಗಾಗಲೇ ಧ್ವನಿ ಎತ್ತಿದ್ದಾರೆ. ಈ ವಿಷಯವಾಗಿ ನಟಿ ಹರ್ಷಿಕಾ ಪೂಣಚ್ಚ ಈ ಕುರಿತು ಒಂದು ಹೊಸ ಬಾಂಬ್ ಅನ್ನು ಸಿಡಿಸಿದ್ದಾರೆ. ಕೆಲವು ನಟಿಯರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಸಿಡಿದೆದ್ದಿದ್ದಾರೆ.. ಕೆಲಸ ಆಗೋವರೆಗೂ ಸುಮ್ಮನಿದ್ದು ನಂತರ ಮೀಟೂ ಎಂದರೆ ಅದು ಎಷ್ಟರ ಮಟ್ಟಿಗೆ ಸರಿ ಎಂದು ಕಿಡಿ ಕೂಡ ಕಾರಿದ್ದಾರೆ.ಅಷ್ಟೆ ಅಲ್ಲದೆ ಎಲ್ಲದ್ದಕ್ಕೂ ಒಂದು ಮಿತಿ ಇರಬೇಕು ಎಂದಿದ್ದಾರೆ.
ಹರ್ಷಿಕಾ ಪೂಣಚ್ಚ ಹೇಳುವ ಪ್ರಕಾರ ನಟಿಯರು ಪಬ್ಲಿಸಿಟಿಗೋಸ್ಕರ ಏನನ್ನು ಬೇಕಾದರೂ ಮಾಡುತ್ತಾರೆ. ಆದರೆ ಇದಕ್ಕೂ ಒಂದು ಮಿತಿ ಇರಬೇಕು. ಒಬ್ಬರ ಕುಟುಂಬವನ್ನು ಒಡೆದು ಅವರ ಪತ್ನಿ, ಮಕ್ಕಳಿಗೆ ನಾಚಿಕೆಯಾಗುವಂತೆ ಮಾಡುತ್ತಿದ್ದಾರೆ. ಈ ರೀತಿ ಆರೋಪ ಮಾಡಿದರೆ 15-20 ವರ್ಷದಿಂದ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟರ ಹೆಸರನ್ನು ಹಾಳಾಗುತ್ತದೆ ಎಂದಿದ್ದಾರೆ. ಅಷ್ಟೆ ಅಲ್ಲದೆ ಹರ್ಷಿಕಾ ಕೆಲವೊಂದು ನಟಿಯರ ಬಗ್ಗೆ ವಿವರವಾಗಿ ಹೇಳಿದ್ದಾರೆ. ನಟಿಯರು ಸಿನಿಮಾಗಾಗಿ ಖ್ಯಾತ ನಟರ ತೋಳ್ತೆಕ್ಕೆಯಲ್ಲಿ ಇದ್ದಿದ್ದನು ನಾನು ಕಂಡಿದ್ದೇನೆ ಎಂದಿದ್ದಾರೆ. ಹೆಸರು ಮಾಡುವವರೆಗೆ ಅವರು ಏನು ಮಾಡಿದರು ಸರಿ ಅನಿಸುತ್ತೆ. ಹೆಸರಿನ ನಂತರ ಯಶಸ್ಸಿಗಾಗಿ ಈಗ ಆರೋಪ ಮಾಡುತ್ತೀರಿ. ಆಗ ಇದೆಲ್ಲಾ ನಿಮಗೆ ಸರಿ ಅನಿಸಿತ್ತು ಈಗ ಅದೆಲ್ಲಾ ತಪ್ಪು ಅಲ್ವಾ ಎಂದು ಹೇಳಿದ್ದಾರೆ.
Comments