ಪುನೀತ್ ಹೊಸ ಸಿನಿಮಾದ ಟೈಟಲ್ ಲಾಂಚ್ ಮಾಡ್ತಿರೋದು ಯಾರು ಗೊತ್ತಾ..?

ಸ್ಯಾಂಡಲ್ ವುಡ್’ನಲ್ಲಿ ರಾಜಕುಮಾರ ಸಿನಿಮಾದ ಸಕ್ಸಸ್ ನಂತರ ಪುನೀತ್ ರಾಜ್ ಕುಮಾರ್ ಮತ್ತು ನಿರ್ದೇಶಕ ಸಂತೋಷ್ ಆನಂದ್ ರಾಮ್ ಜೋಡಿಯಾಗಿ ಮತ್ತೊಂದು ಸಿನಿಮಾವನ್ನು ಮಾಡುತ್ತಿದ್ದಾರೆ. ಅಪ್ಪು ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ಸಿನಿಮಾ ಅಂದರೆ ಹುಚ್ಚೆದ್ದು ಕುಣಿಯೋದು ಗ್ಯಾರೆಂಟಿ.. ಫ್ಯಾಮಿಲಿ ಸಮೇತರಾಗಿ ಕೂತು ಸಿನಿಮಾವನ್ನು ನೋಡಬಹುದು ಅನ್ನೋ ಅಭಿಪ್ರಾಯ ಅಭಿಮಾನಿಗಳಿಗಿದೆ…
ನವೆಂಬರ್ 1 ರಂದು ಪುನೀತ್ ರಾಜ್ ಕುಮಾರ್ ಅಭಿನಯದ ಹೊಸ ಸಿನಿಮಾಗೆ ಟೈಟಲ್ ಫಿಕ್ಸ್ ಆಗಲಿದೆ.ಈ ಸಿನಿಮಾದ ಟೈಟಲ್ ಲಾಂಚ್ ಮಾಡುವುದು ಯಾರು ಎಂಬ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ. ಕನ್ನಡ ರಾಜ್ಯೋತ್ಸವದಂದು ಪುನೀತ್ ಅಭಿಮಾನಿಯೊಬ್ಬರು ಅಭಿಮಾನಿಗಳ ನಡುವೆ ಸಿನಿಮಾದ ಟೈಟಲ್ ಲಾಂಚ್ ಮಾಡಲಿದ್ದಾರೆ, ಈ ವಿಷಯವನ್ನು ಪುನೀತ್ ಫೇಸ್’ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಂದಹಾಗೆ ಕಾವೇರಿ ಥಿಯೇಟರ್ ನಲ್ಲಿ ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮ ನಡೆಯಲಿದೆ. ನವೆಂಬರ್ 1 ರಂದು ಸಂತೋಷ್ ನಿರ್ದೇಶನದ ಹೊಸ ಸಿನಿಮಾಗೆ ಟೈಟಲ್ ಫಿಕ್ಸ್ ಆಗಲಿದೆ.1985ರಲ್ಲಿ ರಿಲೀಸ್ ಆಗಿದ್ದ 'ಜ್ವಾಲಾಮುಖಿ' ಶೀರ್ಷಕೆಯನ್ನ ಪುನೀತ್-ಸಂತೋಷ್ ಸಿನಿಮಾ ಹೆಸರಿಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ,
Comments