ಸ್ಯಾಂಡಲ್ವುಡ್ ‘ನ ‘ಕರಿಚಿರತೆ’ಗೆ ಶುರುವಾಯ್ತು ಮತ್ತೆ ಬಂಧನದ ಭೀತಿ: ದುನಿಯಾ ವಿಜಯ್ ಮಗಳಿಂದಲೇ ದೂರು ದಾಖಲು
ಸ್ಯಾಂಡಲ್ವುಡ್ ‘ನ ಕರಿಚಿರತೆಗೆ ಯಾಕೋ ಟೈಮ್ ಸರಿ ಇಲ್ಲ ಅನ್ಸುತ್ತೆ…ಕೆಲ ದಿನಗಳ ಹಿಂದಷ್ಟೆ ಪಾನಿಪುರಿ ಕಿಟ್ಟಿಯ ಹಲ್ಲೆಯ ಆರೋಪದ ಮೇಲೆ ಜೈಲು ಸೇರಿದ್ರು.. ಆದಾದ ನಂತರ ಬೇಲ್ ಮೇಲೆ ಹೊರಬಂದಿದ್ದರು. ಇದೀಗ ಮತ್ತೆ ದುನಿಯಾ ವಿಜಯ್ ಗೆ ಬಂಧನದ ಬೀತಿ ಶುರುವಾಗಿದೆ.. ದುನಿಯಾ ವಿಜಯ್ ಅವರು ತಮ್ಮ ಮಗಳು ಮೋನಿಕಾ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದ್ದು ಘಟನ ಸಂಬಂಧ ದುನಿಯಾ ವಿಜಿ ಹಾಗೂ ಮೂರನೇ ಹೆಂಡತಿ ಕೀರ್ತಿ ಸೇರಿದಂತೆ ಐವರ ಮೇಲೆ ವಿಜಯ ನಗರ ಪೋಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಈ ಸಂಬಂಧ ಎಫ್ ಐಆರ್ ದಾಖಲು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ದುನಿಯಾ ವಿಜಯ್ ಅವರ ಮಗಳು ಮೋನಿಕಾ ನಿನ್ನೆ ಬಟ್ಟೆಗಳನ್ನು ತರಲು ದುನಿಯಾ ವಿಜಯ್ ಮೂರನೇ ಹೆಂಡತಿ ಕೀರ್ತಿ ಗೌಡ ಇರುವ ಮನೆಗೆ ಹೋಗಿದ್ದಾರೆ. ಈ ಸಮಯದಲ್ಲಿ ಕೀರ್ತಿಗೌಡ ಹಾಗೂ ದುನಿಯಾ ವಿಜಯ್ ಸೇರಿದಂತೆ ಒಟ್ಟು ಐವರು ಮಾರಾಕಾಸ್ತ್ರಗಳನ್ನು ತೋರಿಸಿ, ಬೆದರಿಸಿ, ಹಲ್ಲೆ ಮಾಡಿದ್ದಾರೆ ಎಂದು ಪೋಲಿಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ದೂರು ದಾಖಲಿಸಿಕೊಂಡಿರುವ ಪೋಲಿಸರು ಸೆಕ್ಷನ್ 148 ಮತ್ತು 147 ಸೇರಿದಂತೆ ಕೆಲವು ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Comments