ಅರ್ಜುನ್ ಸರ್ಜಾ ಮೇಲೆ ಸೇಡು ತೀರಿಸಿಕೊಳ್ಳು ಶೃತಿ ಹರಿಹರನ್ ಈಗೆಲ್ಲಾ ಮಾಡ್ತಿದ್ದಾರಾ..!?

23 Oct 2018 9:45 AM | Entertainment
813 Report

ಸದ್ಯ ಸ್ಯಾಂಡಲ್ ವುಡ್’ನಲ್ಲಿ ಮೀಟೂ ಅಭಿಯಾನ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.. ಮೀಟೂ ಚಳವಳಿಯಲ್ಲಿ ನಟಿ ಶ್ರುತಿ ಹರಿಹರನ್​ ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್​ ಸರ್ಜಾ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳ ಆರೋಪಕ್ಕೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ..

ನಟಿ ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ಮೇಲೆ ಸೇಡು ತೀರಿಸಿಕೊಳ್ಳಲು ಹೀಗೆಲ್ಲಾ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದು ಬೇರೆ ಎಲ್ಲಿಂದಲ್ಲೋ ಅಲ್ಲ.. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದಲೇ..! ಈಗಾಗಲೇ ಚಂದನವನದಲ್ಲಿ ಸಾಕಷ್ಟು ಹೆಸರು ಮಾಡಿರುವ ಧ್ರುವ ಸರ್ಜಾ ಜೊತೆ ಸಿನಿಮಾದಲ್ಲಿ ನಟಿಸುವ ಬಯಕೆ ಶೃತಿ ಹರಿಹರನ್’ಗೆ ಇತ್ತಂತೆ…ಅದಕ್ಕೆ ಅರ್ಜುನ್ ಸರ್ಜಾ ಅವಕಾಶ ಕೊಡಲಿಲ್ಲ. ಆದ್ದರಿಂದ ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಧ್ರುವ ಸರ್ಜಾ ಜೊತೆ ಸಿನಿಮಾ ಮಾಡಬೇಕು ಎಂದು ಶೃತಿ ಹರಿಹರನ್ ಅಂದುಕೊಂಡಿದ್ದರು. ಆದರೆ ಅರ್ಜುನ್ ಸರ್ಜಾ ಬೇಡ ಎಂದು ಹೇಳಿದ್ದರಂತೆ, ಈ ಕಾರಣಕ್ಕಾಗಿ ಶೃತಿ ಹೀಗೆಲ್ಲಾ ಆರೋಪ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Edited By

Manjula M

Reported By

Manjula M

Comments