ದುನಿಯಾ ರಶ್ಮಿ ವಿರುದ್ದ ದಾಖಲಾಯ್ತು ದೂರು..! ಕಾರಣ ಏನ್ ಗೊತ್ತಾ..?
ಸ್ಯಾಂಡಲ್ ವುಡ್’ನಲ್ಲಿ ದುನಿಯಾ ಸಿನಿಮಾದ ಮೂಲಕ ಗುರುತಿಸಿಕೊಂಡ ರಶ್ಮಿ ದುನಿಯಾ ರಶ್ಮಿ ಅಂತಾನೇ ಫೇಮಸ್ ಆಗಿದ್ದಾರೆ. ಇದೀಗ ದುನಿಯಾ ರಶ್ಮಿ ಮನೆ ಮೇಲಿಂದ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ.ಪ್ರತೀಕ್ (25) ಆತ್ಮಹತ್ಯೆಗೆ ಶರಣಾದ ಯುವಕ ಎಂದು ತಿಳಿದುಬಂದಿದೆ.
ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿರುವ ಪ್ರತೀಕ್, ರಶ್ಮಿ ಮನೆಯಲ್ಲಿ ನಡೆಯುವ ಕಾರ್ಯಕ್ರಮಗಳ ಫೋಟೋಶೂಟ್ ಮಾಡುತ್ತಿದ್ದರು. ಆದರೆ ಇದ್ದಕ್ಕಿಂದ್ದಂತೆ ಪ್ರತೀಕ್ ಅವರ ಮನೆಯ ಮೇಲಿಂದ ಬಿದ್ದು ಮೃತಪಟ್ಟಿದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ರಶ್ಮಿ ಸಹೋದರ ಅರುಣ್ ಹಾಗೂ ಪ್ರತೀಕ್ ಇಬ್ಬರು ಗೆಳೆಯರಾಗಿದ್ದರು. ಪ್ರತೀಕ್ ಭಾನುವಾರ ರಾತ್ರಿ ರಶ್ಮಿ ಮನೆಯಲ್ಲಿ ನಡೆದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈ ವೇಳೆ ಎಣ್ಣೆ ಮತ್ತಿನಲ್ಲಿ ಪ್ರತೀಕ್ ಮನೆ ಮೇಲಿಂದ ಬಿದ್ದಿದ್ದಾರೆ. ತಕ್ಷಣ ಪ್ರತೀಕ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ಪ್ರತೀಕ್ ಸಾವನ್ನಪ್ಪಿದ್ದಾರೆ. ಈ ಘಟನೆಯ ಸಂಬಂಧ ಪ್ರತೀಕ್ ಪೋಷಕರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ರಶ್ಮಿ ಕುಟುಂಬದವರ ವಿರುದ್ಧ ದೂರನ್ನು ದಾಖಲಿಸಿದ್ದಾರೆ.
Comments