ಬಿಟೌನ್ ಸ್ಟಾರ್ ಜೋಡಿಯ ಮದುವೆ ಡೇಟ್ ಫಿಕ್ಸ್..!

ಬಿ ಟೌನ್ ನ ಸ್ಟಾರ್ ಜೋಡಿ ಎಂದೇ ಹೆಸರಾಗಿದ್ದ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಮದುವೆ ಡೇಟ್ ಫಿಕ್ಸ್ ಆಗಿದೆ. ಈ ವಿಷಯವನ್ನು ಇಬ್ಬರೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸ್ಪಷ್ಟಪಡಿಸಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ ಎನ್ನಬಹುದು.
ನವೆಂಬರ್ 14, 15 ರಂದೇ ತಮ್ಮ ವಿವಾಹ ನಡೆಯಲಿರುವುದಾಗಿ ತಿಳಿಸಿದ್ದಾರೆ. ಇದೀಗ ಮೂಲಗಳ ಪ್ರಕಾರ ವಧು ಮತ್ತು ವರನ ಕುಟುಂಬದವರು ಮದುವೆ ಶಾಪಿಂಗ್ ಮಾಡುವುದರಲ್ಲಿ ಬ್ಯುಸಿ ಇದ್ದಾರೆ. ದೀಪಿಕಾ ಪಡುಕೋಣೆ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಿಂದಿಯಲ್ಲಿರುವ ತನ್ನ ವಿವಾಹದ ಆಮಂತ್ರಣ ಪತ್ರಿಕೆಯನ್ನೂ ಅಪ್ ಲೋಡ್ ಮಾಡಿದ್ದಾರೆ. ಆದರೆ ಒಂದೇ ಒಂದು ಬೇಸರದ ಸಂಗತಿಯೆಂದರೆ ಮದುವೆ ಎಲ್ಲಿ ಎಂಬುದು ಮಾತ್ರ ಯಾರಿಗೂ ಕೂಡ ತಿಳಿಸಿಲ್ಲ..
Comments