ಶೃತಿ ಹರಿಹರನ್ ಪರ ಬ್ಯಾಟ್ ಬೀಸಿದ ಕಿರಿಕ್ ಹುಡುಗಿ ಸಂಯುಕ್ತಾ ಹೆಗಡೆ

ಇತ್ತಿಚಿಗೆ ಚಿತ್ರರಂಗದಲ್ಲಿ ಮೀಟೂ ಅಭಿಯಾನದಿಂದಾಗಿ ಸಾಕಷ್ಟುಚರ್ಚೆಗೆ ಒಳಗುತ್ತಿದೆ. ಬೇರೆ ಚಿತ್ರರಂಗದಲ್ಲಿ ಎದ್ದಿದ್ದ ಬಿರುಗಾಳಿ ಇದೀಗ ಸ್ಯಾಂಡಲ್ ವುಡ್ ಗೂ ಕೂಡ ಲಗ್ಗೆ ಇಟ್ಟಿದೆ. ಮೊದ ಮೊದಲು ಗಾಯಕಿಯೊಬ್ಬರು ರಘು ದೀಕ್ಷೀತ್ ಮೇಲೆ ಆರೋಪವನ್ನು ಹೊರಿಸಿದ್ದರು.. ಆದರೆ ಇದೀಗ ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿದ್ದಾರೆ.
ಎಸ್… ಕೆಲ ದಿನಗಳ ಹಿಂದೆ ಶೃತಿ ಹರಿಹರನ್ ಅರ್ಜುನ್ ಸರ್ಜಾ ವಿರುದ್ದ ಮೀಟೂ ಆರೋಪವನ್ನು ಹೊರೆಸಿದ್ದರು. ಶೃತಿ ಹರಿಹರನ್’ಗೆ ಶ್ರದ್ಧಾ ಶ್ರೀನಾಥ್ ಹಾಗೂ ರಾಗಿಣಿ ದ್ವಿವೇದಿ ಸಾಥ್ ಕೊಟ್ಟಿದ್ದರು. ಇದೀಗ ಕಿರಿಕ್ ಹುಡುಗಿ ಅಂತಾನೇ ಪೇಮಸ್ ಆಗಿರುವ ಸಂಯುಕ್ತಾ ಹೆಗಡೆ ಕೂಡ ಈ ಕುರಿತು ಟ್ವೀಟ್ ಮಾಡಿದ್ದಾರೆ. ಅರ್ಜುನ್ ಸರ್ಜಾಗೆ ಒಳ್ಳೆಯ ಹೆಸರಿನ ಜೊತೆ ಹಣ ಬೆಂಬಲವೂ ಇದೆ. ಆದ್ದರಿಂದ ಅವರಿಗೆ ಜನರು ಬೆಂಬಲ ಕೊಡುತ್ತಾರೆ.ಹಾಗಂದ ಮಾತ್ರಕ್ಕೆ ಕೀಳು ಮಟ್ಟದ ವರ್ತನೆ ತೋರಲು ಯಾರು ಅಧಿಕಾರ ಕೊಟ್ಟವರು ಎಂದು ಕಿಡಿಕಾರಿದ್ದಾರೆ. ಈ ಮೀಟೂ ಅಭಿಯಾನದಿಂದ ಸ್ಯಾಂಡಲ್’ವುಡ್ ನಲ್ಲಿ ಇನ್ನೂ ಯಾವ ಯಾವ ರೀತಿಯ ಬದಲಾವಣೆಗಳು ಆಗುತ್ತವೆ ಅನ್ನೋದನ್ನ ಕಾದು ನೋಡಬೇಕಿದೆ.
Comments