ನಟಿ ಆಮಿ ಜಾಕ್ಸನ್ ವಿರುದ್ದ ಕನ್ನಡಿಗರು ಸಿಟ್ಟು ಮಾಡಿಕೊಂಡಿದ್ಯಾಕೆ..!?

ಸ್ಯಾಂಡಲ್'ವುಡ್ ನ್ಲಲಿ ಬಹು ನಿರೀಕ್ಷಿತ ಸಿನಿಮಾದ ದಿ ವಿಲನ್ ರಿಲೀಸ್ ಆಗಿ ಸಾಕಷ್ಟು ಸದ್ದು ಮಾಡುತ್ತಿದೆ. ಇದೀಗ ಸ್ಯಾಂಡಲ್ ವುಡ್ ನ 'ದಿ ವಿಲನ್' ಚಿತ್ರದ ನಟಿ ಆಮಿ ಜಾಕ್ಸನ್ ವಿರುದ್ಧ ಇದೀಗ ಕನ್ನಡ ಚಿತ್ರದ ಅಭಿಮಾನಿಗಳು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ನಟಿ ಆಮಿ ಜಾಕ್ಸನ್ ವಿರುದ್ದ ತಿರುಗಿ ಬಿದ್ದಿದ್ದಾರೆ.
ನಟಿ ಆಮಿ ಜಾಕ್ಸನ್ 'ದಿ ವಿಲನ್' ಚಿತ್ರದ ಮೂಲಕ ಮೊದಲ ಬಾರಿಗೆ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾವು ಗುರುವಾರ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಕೂಡ ದೊರೆಯಿತು. ಈ ಹಿನ್ನಲೆಯಲ್ಲಿ ನಟಿ ಟ್ವೀಟರ್ ನಲ್ಲಿ ''ಇಂದು ನನಗೆ ವಿಶೇಷ ದಿನ. ಇವತ್ತು 'ದಿ ವಿಲನ್' ಚಿತ್ರತಂಡ ಬಿಡುಗಡೆಯ ಸಂಭ್ರಮದಲ್ಲಿ ಇದೆ. 'ಕಾಲಿವುಡ್' ನಲ್ಲಿ ನಟಿಸುವುದಕ್ಕೆ ಅವಕಾಶ ನೀಡಿದ ನಿರ್ದೇಶಕ ಪ್ರೇಮ್ ಅವರಿಗೆ ನಾನು ಧನ್ಯವಾದ ತಿಳಿಸುತ್ತಿದ್ದೇನೆ.'' ಎಂದು ಬರೆದುಕೊಂಡಿದ್ದರು. ನಟಿ 'ಸ್ಯಾಂಡಲ್ ವುಡ್' ಎಂದು ಬರೆಯುವ ಬದಲು 'ಕಾಲಿವುಡ್' ಎಂದು ಬರೆದಿರುವುದು ಕನ್ನಡಿಗರ ಆಕ್ರೋಶಕ್ಕೆ ಇದೀಗ ಕಾರಣವಾಗಿದೆ. ಈ ಬಗ್ಗೆ ಕನ್ನಡ ಸಿನಿಮಾ ಅಭಿಮಾನಿಗಳು ನಟಿಯನ್ನು ಸಖತ್ತಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. 'ಯಾವ ಚಿತ್ರರಂಗದಲ್ಲಿ ಅಭಿನಯಿಸುತ್ತೇನೆ ಎಂದು ತಿಳಿಯದೆ ಅಭಿನಯಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ನಿರ್ದೇಶಕ ಪ್ರೇಮ್. ಇಂತಹವರಿಗೆ ಅವಕಾಶ ನೀಡಬಾರದು, ಮೊದಲ ನಿಮ್ಮ ತಪ್ಪನ್ನು ಸರಿ ಮಾಡಿಕೊಳ್ಳಿ ಎಂದು ಕೂಡ ತಿಳಿಸಿದ್ದಾರೆ.
Comments