ರೈತರ ಸಾಲ ಮನ್ನಾ ಮಾಡಲು ಮುಂದಾದ 'ಬಿಗ್ ಬಿ'..!

ಅಮಿತಾಬ್ ಬಚ್ಚನ್... ಅಂದಿನಿಂದ ಇಂದಿಗೂ ಸಹ ಬಾಲಿವುಡ್‌ನ ಐಕಾನ್ ಎಂದರೆ ನಿಜಕ್ಕೂ ತಪ್ಪಾಗಲಾರದು. ಯಾವಾಗಲೂ ಸುದ್ದಿಯಲ್ಲಿರುವ ಬಿಗ್ ಬಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸಮಾಜ ಸೇವೆಯ ಮೂಲಕ , ರೈತರ ಸಾಲ ಮರು ಪಾವತಿಸಲು ಬಿಗ್ ಬಿ ಮುಂದೆ ಬಂದಿದ್ದಾರೆ.
ಉತ್ತರಪ್ರದೇಶದಲ್ಲಿರುವ 850 ರೈತರ ಸಾಲ ಪಾವತಿಸಲು ಅಮಿತಾಬ್ ಬಚ್ಚನ್ ಚಿಂತಿಸಿದ್ದಾರೆ. ಈ ಬಗ್ಗೆ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ, ಉತ್ತರ ಪ್ರದೇಶದ ಸುಮಾರು 850 ರೈತರ ಸಾಲವನ್ನು ತೀರಿಸಲು ಸಿದ್ಧನಿದ್ದೇನೆ. ಈ ಬಗ್ಗೆ ಸರ್ಕಾರದಿಂದ ಮಾಹಿತಿ ಕೇಳಿದ್ದೇನೆ. ಬ್ಯಾಂಕ್ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಯಾವ ರೀತಿ ಪ್ರೊಸಿಜರ್ ಮಾಡಬೇಕೆಂದು ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ. ಉತ್ತರ ಪ್ರದೇಶ ಸರಕಾರ ಗುರುತಿಸಿರುವ 850 ರೈತರ ಸಾಲದ ಮೊತ್ತ 5.5 ಕೋಟಿ ರೂಪಾಯಿ ಆಗಲಿದೆ ಎಂದು ಅಂದಾಜು ಮಾಡಿದೆ. ಎಲ್ಲ ರೈತರ ಸಾಲ ಮರುಪಾವತಿ ಕಷ್ಟ. ಆದ್ದರಿಂದ ಆತ್ಮಹತ್ಯೆಗೆ ಶರಣಾಗುವುದನ್ನು ತಪ್ಪಿಸಲು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅಮಿತಾಬ್ ತಿಳಿಸಿದ್ದಾರೆ.
Comments