ದಿ ವಿಲನ್ ಬಿಡುಗಡೆ ಬಳಿಕ ಟ್ವೀಟ್ ಮೂಲಕ ಗಮನ ಸೆಳೆದ ಪ್ರಿಯಸುದೀಪ್
ಇಂದು ತೆರೆಗೆ ಬಂದ ಬಹು ನಿರೀಕ್ಷಿತ ದಿ ವಿಲನ್ ಚಿತ್ರಕ್ಕೆ ಪ್ರೇಕ್ಷೆಕರಿಂದ ಸಿಕ್ಕ ಅಭೂತ ಪೂರ್ವ ಬೆಂಬಲಕ್ಕೆ ಮನಸೋತ ಸುದೀಪ್ ಅವರ ಪತ್ನಿ ಪ್ರಿಯ ದಿ ವಿಲನ್ ಚಿತ್ರ ತಂಡಕ್ಕೆ ಟ್ವೀಟ್ ಮೂಲಕ ಶುಭ ಕೋರಿದ್ದಾರೆ.
ಇನ್ನು ಸುದೀಪ್ ಪತ್ನಿ ಪ್ರಿಯ ಅವರು ತಮ್ಮ ಟ್ವೀಟ್ ನಲ್ಲಿ ಚಿತ್ರ ಬಿಡುಗಡೆಗೂ ಮೊದಲೇ ಚಿತ್ರಕ್ಕೆ ಸಿಕ್ಕ ಅಭೂತ ಪೂರ್ವ ಬೆಂಬಲದಿಂದಾಗಿ ಖುಷಿಯಾಗಿರುವ ಪ್ರಿಯಾ ಅವರು, 'ನಾನು ಈವೆರೆಗೂ ಈ ರೀತಿಯ ಕ್ರೇಜ್ ಅನ್ನು ಈ ಹಿಂದೆ ನೋಡಿಯೇ ಇರಲಿಲ್ಲ. ರಾಜ್ಯಾದ್ಯಂತ ಇದು ಹಬ್ಬದ ರೀತಿ ಆಗಿದೆ. ಎನರ್ಜಿಟಿಕ್ ಶಿವಣ್ಣ, ನಿರ್ದೇಶಕ ಪ್ರೇಮ್ ಹಾಗೂ ನನ್ನ ಪ್ರೀತಿಯ ಹೀರೋ ಸುದೀಪ್ ಸೇರಿದಂತೆ ಇಡೀ ‘ದಿ ವಿಲನ್’ ಚಿತ್ರತಂಡಕ್ಕೆ ನನ್ನ ಶುಭಾಶಯಗಳು' ಎಂದು ಬರೆದುಕೊಂಡಿದರೆ.
ಶಿವರಾಜ್ ಕುಮಾರ್ ಮತ್ತು ಸುದೀಪ್ ಇದೇ ಮೊದಲ ಬಾರಿಗೆ ಜೊತೆಯಾಗಿ ಅಭಿನಯಿಸಿರುವ ಬಹು ನಿರೀಕ್ಷಿತ ಚಿತ್ರ ದಿ ವಿಲನ್ ರಾಜ್ಯದಂತ ಇಂದು ತೆರೆಕಂಡಿದ್ದು, ದೇಶಾದ್ಯಂತ ಸುಮಾರು 600 ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸುದೀಪ್ ಮತ್ತು ಶಿವಣ್ಣ ಅಭಿಮಾನಿಗಳಲ್ಲಿ ಮುಖದಲ್ಲಿ ಮಂದಹಾಸ ಮೂಡಿದೆ.
Comments