ನರ್ತಕಿ ಚಿತ್ರಮಂದಿರದ ಮಾಲೀಕರ ವಿರುದ್ಧ ನಿರ್ದೇಶಕ ಪ್ರೇಮ್ ಗರಂ ಆಗಿದ್ದು ಯಾಕೆ..!?
ಸ್ಯಾಂಡಲ್ ವುಡ್ ಬಹು ನಿರೀಕ್ಷೀತ ಸಿನಿಮಾ ಇಂದೂ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ನಟನೆಯ ದಿ ವಿಲನ್ ಚಿತ್ರದಲ್ಲಿ ವಿಲನ್ ಯಾರು ಎಂಬ ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ..
ದೇಶಾದ್ಯಂತ 550 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿರುವ ದಿ ವಿಲನ್ ಸಿನಿಮಾಕ್ಕೆ ಬೆಳಗ್ಗಿನಿಂದಲೇ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಆದರೆ ನರ್ತಕಿ ಚಿತ್ರಮಂದಿರದಲ್ಲಿ ಮಾತ್ರ ಬಿಡುಗಡೆ ದಿನವೇ ಸೌಂಡ್ ಸಮಸ್ಯೆ ಎದುರಾಗಿದ್ದು, ನಿರ್ದೇಶಕ ಪ್ರೇಮ್ ಚಿತ್ರಮಂದಿರದ ಮಾಲೀಕರ ವಿರುದ್ಧ ಸಖತ್ ಗರಂ ಆಗಿದ್ದಾರೆ. ಒಟ್ಟಾರೆ ಜೋಗಿ ಪ್ರೇಮ್ ನಿರ್ದೇಶನದ ದಿ ವಿಲನ್ ಸಿನಿಮಾಗೆ ಬಿಡುಗಡೆಗೂ ಮುನ್ನವೂ ಸಮಸ್ಯೆಯೇ.. ಬಿಡುಗಡೆಯ ನಂತರವು ಸಮಸ್ಯೆಯೇ…
Comments