ಆಸ್ಪತ್ರೆಯಿಂದ ಮನೆಗೆ ಬಂದ ಭಜರಂಗಿ ಶಿವಣ್ಣ
ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‍ಕುಮಾರ್ ಹಲವಾರು ಚಿತ್ರಗಳಲ್ಲಿ ಅಭಿನಯಿಸಿ ಜನ ಮನ ಗೆದ್ದಿದ್ದಾರೆ. ಅಭಿಮಾನಿಗಳ ಮನಸ್ಸಲ್ಲಿ ಮೊನ್ನೆವರೆಗೂ ಶಿವಣ್ಣ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಕೊಂಚ ಬೇಸರ ಮೂಡಿಸಿತ್ತು. ಆದರೆ ಈಗ ವೈದ್ಯರು ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಕಳೆದ ಎರಡು ದಿನಗಳಿಂದ ವೈರಲ್ ಫೀವರ್‍ನಿಂದ ಬಳಲುತ್ತಿದ್ದ ಶಿವಣ್ಣ ಆರೋಗ್ಯವಾಗಿದ್ದು, ಮನೆಗೆ ವಾಪಸ್ಸಾಗಿದ್ದಾರೆ. ಇದೀಗ ಶಿವಣ್ಣನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದರಿಂದ ಶಿವಣ್ಣನನ್ನು ಡಿಸ್ಟಾರ್ಜ್ ಮಾಡಲಾಗಿದೆ.
ಶಿವಣ್ಣನಿಗೆ ವಿಶ್ರಾಂತಿಯ ಅವಶ್ಯಕತೆ ಇರುವುದರಿಂದ ಸದ್ಯದ ಮಟ್ಟಿಗೆ ಶಿವಣ್ಣ ಎಲ್ಲೂ ಹೋಗುವಂತಿಲ್ಲ. ಇದೇ ಶುಕ್ರವಾರ ಶಿವಣ್ಣ- ಸುದೀಪ್ ಕಾಂಬೀನೇಷನ್ನ ಬಹು ನಿರೀಕ್ಷಿತ ಚಿತ್ರ ದಿ ವಿಲನ್ ಬಿಡುಗಡೆಯಾಗಲಿದ್ದು ಸುದೀಪ್ ಹಾಗೂ ಶಿವಣ್ಣ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಆರೋಗ್ಯ ಸರಿಯಿಲ್ಲದ ಕಾರಣ ಸದ್ಯದ ಮಟ್ಟಿಗೆ ಅಭಿಮಾನಿಗಳ ಜತೆ ಶಿವಣ್ಣ ಮೂವಿ ನೋಡೋಕೆ ಬರೋದು ಡೌಟೇ.. ದಿವಿಲನ್ ಸಿನಿಮಾ ದೇಶದಾದ್ಯಂತ ಭರ್ಜರಿ ಪ್ರದರ್ಶನ ಕಾಣಲಿದೆ. ಜೋಗಿ ಪ್ರೇಮ್ ನಿರ್ದೇಶನದ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಎಷ್ಟರ ಮಟ್ಟಿಗೆ ಸೌಂಡ್ ಮಾಡುತ್ತೆ ಅನ್ನೋದನ ಕಾದುನೋಡಬೇಕಿದೆ.
Comments