ಯಜಮಾನ,ಒಡೆಯರ್ ನಂತರ ದಚ್ಚು ಹೊಸ ಸಿನಿಮಾಗೆ ಟೈಟಲ್ ಫಿಕ್ಸ್..!
ಸ್ಯಾಂಡಲ್ವುಡ್’ನ ಮೋಸ್ಟ್ ಹ್ಯಾಂಡ್ಸಮ್ ಹೀರೋಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಒಬ್ಬರು..ಇತ್ತಿಚೆಗೆ ದರ್ಶನ್ ಕಾರು ಅಪಘಾತದಲ್ಲಿ ತಮ್ಮ ಕೈ ಮುರಿದುಕೊಂಡಿದ್ದರು.. ಇದರಿಂದ ದರ್ಶನ್ ಅಭಿಮಾನಿಗಳು ತುಂಬಾ ಬೇಸರವಾಗಿದ್ದರು. ಆದರೆ ಈಗ ದರ್ಶನ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ದರ್ಶನ್ ಅವರ ಹೊಸ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗಾಗಲೇ ಯಜಮಾನ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಮಾಡಿ ಒಡೆಯರ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.. ಈ ನಡುವೆ ಮತ್ತೊಂದು ಹೊಸ ಸಿನಿಮಾಗೆ ದರ್ಶನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಚಿತ್ರಕ್ಕೆ ಚೌಕ ಸಿನಿಮಾದ ನಿರ್ದೇಶಕ ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಹೆಬ್ಬುಲಿ ನಿರ್ಮಾಪಕ ಉಮಾಪತಿ ಬಂಡವಾಳ ಹೂಡುತ್ತಿದ್ದಾರೆ ಅನ್ನೋದು ಕೂಡ ಫೈನಲ್ ಆಗಿದೆ. ಆದರೆ ಸಿನಿಮಾ ಟೈಟಲ್ ಮಾತ್ರ ಫೈನಲ್ ಆಗಿರಲಿಲ್ಲ.ಇದೀಗ ದರ್ಶನ್ ಮತ್ತು ತರುಣ್ ಸುಧೀರ್ ಕಾಂಬಿನೇಷನ್ ನ ಹೊಸ ಸಿನಿಮಾಗೆ ‘ರಾಬರ್ಟ್’ ಅಂತ ನಾಮಕರಣ ಮಾಡಲಾಗಿದೆ. ಸದ್ಯದಲ್ಲೇ ರಾಬರ್ಟ್ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡುತ್ತೇವೆ ಎಂದು ಚಿತ್ರ ತಂಡ ತಿಳಿಸಿದೆ.
Comments