ಭಯ ಹುಟ್ಟಿಸುವಂತಿದೆ ‘ದಮಯಂತಿ’ಯ ಲುಕ್..!



ಚಂದನವನದ ಚಂದದ ಹುಡುಗಿ ನಟಿ ರಾಧಿಕಾ ಕುಮಾರಸ್ವಾಮಿ ಅದ್ಯಾಕೋ ಗೊತ್ತಿಲ್ಲ.. ಸ್ವಲ್ಪ ವರ್ಷಗಳ ನಂತರ ಚಲನಚಿತ್ರದಿಂದ ದೂರನೇ ಉಳಿದುಬಿಟ್ಟಿದ್ದರು.. ನಂತರ ಸ್ವೀಟಿ ಸಿನಿಮಾದ ನಂತರ ಸೆಕೆಂಡ್ ಇನ್ನಿಂಗ್ ಶುರುಮಾಡಿದರು.. ಇದೀಗ ದಮಯಂತಿ ಸಿನಿಮಾದ ಮೂಲಕ ಮತ್ತೊಮ್ಮೆ ಕಮಾಲ್ ಮಾಡಲು ಹೊರಟಿದ್ದಾರೆ..
ಸ್ಯಾಂಡಲ್ ವುಡ್ ನ ಸ್ವೀಟಿ ಈಗಾಗಲೇ ದಮಯಂತಿ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಎಲ್ಲರಿಗೂ ಕೂಡ ಗೊತ್ತಿರುವ ವಿಚಾರ. ಇದೀಗ ದಮಯಂತಿ ಚಿತ್ರದಲ್ಲಿನ ರಾಧಿಕಾ ಅವರ ಲುಕ್ ರಿವೀಲ್ ಆಗಿದೆ. ಮಹಿಳಾ ಪ್ರಧಾನ ಚಿತ್ರವಾಗಿರೋ ದಮಯಂತಿ ಫಸ್ಟ್ ಲುಕ್ ಹೇಗಿರುತ್ತೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮೂಡಿತ್ತು. ಈಗ ರಾಧಿಕಾ 'ದಮಯಂತಿ' ಲುಕ್ ಬಿಡುಗಡೆಯಾಗಿದೆ. ಮೈ ತುಂಬ ಆಭರಣಗಳು, ಬಲಕೆನ್ನೆಯ ಮೇಲೆ ಮಾರ್ಕ್, ಈ ಅವತಾರ ನೋಡುಗರಲ್ಲಿ ಸಿಕ್ಕಾಪಟ್ಟೆ ಭಯ ಹುಟ್ಟಿಸುವಂತಿದೆ. ಈ ಚಿತ್ರವನ್ನು ವೈರ ಸಿನಿಮಾ ಖ್ಯಾತಿಯ ನವರಸನ್ ನಿರ್ಮಾಣದ ಜೊತೆಗೆ ನಿರ್ದೇಶನವನ್ನು ಕೂಡ ಮಾಡುತ್ತಿದ್ದಾರೆ. ಮುಂದಿನ ತಿಂಗಳು ದಮಯಂತಿ ಚಿತ್ರದ ಮುಹೂರ್ತ ಸೆಟ್ಟೆರಲಿದೆ. ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾಯುತ್ತಿರುವುದಂತೂ ಸುಳ್ಳಲ್ಲ..
Comments