ಪುಟ್ಟಗೌರಿ ಹುಡುಗ ರಕ್ಷಿತ್’ಗೆ ಸೋನು ಗೌಡ ನಾಯಕಿ
ಪುಟ್ಟಗೌರಿ ಮದುವೆಯ ಖ್ಯಾತಿಯ ಮಹೇಶ್ ಅಲಿಯಾಸ್ ರಕ್ಷಿತ್ ಇದೀಗ ಸಿನಿಮಾ ಮಾಡಲು ಮುಂದಾಗಿದ್ದಾರೆ.. ಸಾಹಿತಿ ಬಿಎಲ್ ವೇಣು ಅವರ 'ಕೆಲಸದಾಕೆ' ಎನ್ನುವ ಪುಟ್ಟ ಕತೆ ಆಧರಿಸಿದ ದೊಡ್ಡ ಸಿನಿಮಾ ಮಾಡಿದ್ದರು.. ಕನ್ನಡ ಚಿತ್ರರಂಗದ ಹಳೆಯ ನಿರ್ದೇಶಕ ಚಿಕ್ಕಣ್ಣ ಅವರು ನಿರ್ದೇಶನ ಮಾಡುತ್ತಿದ್ದಾರೆ .
ತಮ್ಮ 73 ನೇ ವಯಸ್ಸಿನಲ್ಲೂ ಕೂಡ ಯುವಜನತೆಯ ಜೊತೆ ಸಿನಿಮಾ ಮಾಡುತ್ತಿದ್ದಾರೆ. ರಂಗಾಯಣ ರಘು, ರಮೇಶ್ ಭಟ್, ಎಂ ಎಸ್ ಉಮೇಶ್, ಮಜಾ ಟಾಕೀಸ್ ಪವನ್ ಚಿತ್ರದ ಮುಖ್ಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ರಕ್ಷಿತ್ ಈಗಾಗಲೇ ಕಿರುತೆರೆಯಲ್ಲಿ ಪ್ರಸಿದ್ಧಿ ಪಡೆದುಕೊಂಡಿರುವ ನಟ. 'ಪುಟ್ಟಗೌರಿ ಮದುವೆ' ಧಾರಾವಾಹಿ ನೋಡಿದವರಿಗೆ ಇವರ ಮುಖ ಪರಿಚಯವಿರುತ್ತದೆ. ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಸೋನು ಗೌಡ ಜೊತೆಗೆ ಬಾಂಬೆ ಮೂಲದ ಇಶಾ ಛಾಬ್ರಾ ಕೂಡ ಅಭಿನಯಿಸುತ್ತಿದ್ದಾರೆ..ತುಂಬಾ ವರ್ಷಗಳ ನಂತರ ಈಗ ಚಿಕ್ಕಣ್ಣ ನಿರ್ದೇಶನದ 'ಕಾಲ್+ ಎ= ಕಾಲೇಜ್ ' ಚಿತ್ರದ ಮೂಲಕ ಕನ್ನಡಕ್ಕೆ ಮತ್ತೆ ಬಂದಿದ್ದಾರೆ..
Comments