ಬಾಲಿವುಡ್’ನ ಈ ಖ್ಯಾತ ನಟನಿಗೆ ಯಶ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟವಂತೆ..!



ಸ್ಯಾಂಡಲ್ ವುಡ್’ನ ಕನ್ನಡ ಸಿನಿಮಾಗಳು ಇತ್ತೀಚಿನ ದಿನಗಳಲ್ಲಿ ಭಾರತದ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡುತ್ತಿವೆ. ನಗರದ ಲಾಲ್ ಬಾಗ್ ಹತ್ತಿರ ನೂತನವಾಗಿ ನಿರ್ಮಾಣವಾಗಿರುವ ಶುಚಿ, ರುಚಿ ಸೇವೆ ಹಾಗೂ ಉತ್ತಮ ಆರೋಗ್ಯಕ್ಕೆ ಮಾನ್ಯತೆ ನೀಡುವ 'ಎನರ್ಜಿ ಅಡ್ಡಾ' ಹೆಲ್ತ್ ಆಂಡ್ ವೆಲ್ ನೆಸ್ ರೆಸ್ಟೋರೆಂಟ್ ಉದ್ಘಾಟಿಸಿ ಮಾತನಾಡಿದ ಬಾಲಿವುಡ್ ಖ್ಯಾತ ನಟ ಶ್ರೇಯಸ್ ತಲ್ಪಾಡೆ ಅವರು ''ಕನ್ನಡ ಸಿನಿಮಾಗಳನ್ನು ನಾನು ಮೊದಲಿನಿಂದಲೂ ಕೂಡ ನೋಡಿಕೊಂಡು ಬೆಳೆದವನು ಡಾ. ರಾಜ್ ಕುಮಾರ್ ಹಾಗೂ ಯಶ್ ನನ್ನ ನೆಚ್ಚಿನ ನಟರಾಗಿದ್ದಾರೆ'' ಎಂದು ಹೇಳಿದರು.
'ಬೆಂಗಳೂರು ನನಗೆ ಇಷ್ಟವಾದ ಜಾಗ. ಇಲ್ಲಿನ ವಾತಾವರಣ ತುಂಬಾನೇ ಚೆನ್ನಾಗಿದೆ. ಇಲ್ಲಿ ನನಗೆ ಚಿತ್ರರಂಗದ ಹಲವಾರು ಸ್ನೇಹಿತರಿದ್ದು, ಇದರಿಂದಾಗಿ ಇಲ್ಲಿಗೆ ಬಂದು ಹೋಗಲು ನನಗೆ ತುಂಬಾ ಇಷ್ಟ ಎಂದರು. ಇನ್ನೂ ಎನರ್ಜಿ ಅಡ್ಡಾ ಬಗ್ಗೆ ಪ್ರತಿಕ್ರಿಯಿಸಿ, ''ಜನರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಪೌಷ್ಠಿಕ ಆಹಾರ ಸೇವನೆ ಮಾಡಬೇಕಾದ್ದು ಅತ್ಯವಶ್ಯಕವಾಗಿದೆ. ಇಲ್ಲಿ ಗಿಡಮೂಲಿಕೆಗಳಿಂದ ತಯಾರಿಸುವ ಜ್ಯೂಸ್ ತುಂಬಾ ಆರೋಗ್ಯಕರವಾಗಿರುತ್ತದೆ'' ಎಂದು ತಿಳಿಸಿದರು.
Comments